ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತೊಂದು ಭರ್ಜರಿ ಗೆಲುವು ದಾಖಲಿಸಿದೆ. ತಮ್ಮ 5ನೇ ಪಂದ್ಯದಲ್ಕು ಬಾಂಗ್ಲಾದೇಶವನ್ನು 149 ರನ್ಗಳಿಂದ ಸೋಲಿಸಿ ನಾಲ್ಕನೇ ಜಯ ದಾಖಲಿಸಿತು.
383 ರನ್ ಗೆಲುವಿನ ಗುರಿ ಬೆನ್ನಟ್ಟಿದ ಬಾಂಗ್ಲಾ 46.3 ಓವರ್ ಗಳಲ್ಲಿ 233 ರನ್ ಗಳಿಸಿ ಆಲೌಟ್ ಆಯಿತು. ಏಕಾಂಗಿ ಹೋರಾಟ ಮಾಡಿದ
ಮಹ್ಮುದುಲ್ಲಾ ಗಳಿಸಿದ ಶತಕ ವ್ಯರ್ಥವಯಿತು. 111 ಎಸೆತಗಳಲ್ಲಿ 4 ಸಿಕ್ಸರ್, 11 ಬೌಂಡರಿಗಳೊಂದಿಗೆ 111 ರನ್ ಸಿಡಿಸಿದರು. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಜೆರಾಲ್ಡ್ ಕೊಎಟ್ಝೀ 3, ಮಾರ್ಕೋ ಜಾನ್ಸನ್ 2, ಲಿಝಾರ್ಡ್ ವಿಲಿಯಮ್ಸ್ 2 ವಿಕೆಟ್ ಪಡೆದರು. ಕೇಶವ್ ಮಹರಾಜ್ 1 ವಿಕೆಟ್ ಪಡೆದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಕಲೆ ಹಾಕಿತು. ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತೊಮ್ಮೆ ಅಬ್ಬರಿಸಿದರು. ಕ್ವಿಂಟನ್ ಡಿʼಕಾಕ್ 140 ಎಸೆತಗಳಲ್ಲಿ 15 ಬೌಂಡರಿ, 7 ಸಿಕ್ಸರ್ ಗಳೊಂದಿಗೆ 174 ರನ್ ಸಿಡಿಸಿದರು. ಹೆನ್ರಿಚ್ 49 ಎಸೆತಗಳಲ್ಲಿ 8 ಸಿಕ್ಸರ್, 2 ಬೌಂಡರಿಗಳೊಂದಿಗೆ 90 ರನ್ ಗಳಿಸಿದರು. ನಾಯಕ ಐಡೆನ್ ಮಾರ್ಕ್ರಮ್ 69 ಬೌಲ್ ಗಳಲ್ಲಿ 7 ಬೌಂಡರಿ ಸಹೀತ 60 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 15 ಬಾಲ್ಗಳಲ್ಲಿ 4 ಸಿಕ್ಸರ್, 1 ಬೌಂಡರಿಯೊಂದಿಗೆ 34 ರನ್ ಸಿಡಿಸಿದರು.