ಲಖನೌ:ಆರಂಭಿಕ ಆಟಗಾರರಾದ ಏಡನ್ ಮರ್ಕರಂ ಮತ್ತು ನಿಕೋಲಸ್ ಪೂರನ್ ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರು ವಿಕೆಟ್ಗಳ ಸುಲಭ ಜಯಪಡೆಯಿತು. ಇದು ಲಖನೌ ತಂಡಕ್ಕೆ ಸತತ ಮೂರನೇ ಗೆಲುವು
ಏಕನಾ ಕ್ರೀಡಾಂಗಣದಲ್ಲಿ ಗೆಲುವಿಗೆ 181 ರನ್ಗಳ ಗುರಿಯನ್ನು ಬೆನ್ನಟ್ಟಿದ
ಲಖನೌ ಮೂರು ಎಸೆತಗಳಿರುವಂತೆ 4 ವಿಕೆಟ್ಗೆ 186 ರನ್ ಹೊಡೆಯಿತು.ಮರ್ಕರಂ ಬಿರುಸಿನ 58 ರನ್ (31ಎ, 4×9, 6×1) ಹೊಡೆದರು. ಪೂರನ್ (61, 34ಎ, 4×1, 6×7) ನಾಲ್ಕನೇ ಅರ್ಧ ಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಪೂರನ್ 349 ರನ್ಗಳೊಡನೆ ಬ್ಯಾಟರ್ಗಳ ಪಟ್ಟಿಯಲ್ಲಿ ಸಾಯಿ ಸುದರ್ಶನ್ (329 ರನ್) ಅವರನ್ನು ಹಿಂದೆಹಾಕಿ ಮತ್ತೆ ಅಗ್ರಸ್ಥಾನಕ್ಕೇರಿದರು.
ಇನಿಂಗ್ಸ್ ಆರಂಭಿಸಿದ ನಾಯಕ ರಿಷಭ್ ಪಂತ್ (21, 18ಎ) ಮೊದಲ ವಿಕೆಟ್ಗೆ ಮರ್ಕರಂ ಜೊತೆ 6.1 ಓವರುಗಳಲ್ಲಿ 65 ರನ್ ಸೇರಿಸಿದ್ದರು. ಆಯುಷ್ ಬಡೋನಿ ಅಜೇಯ 28 ರನ್ ಗಳಿಸಿದರು. ಮೊದಲು, ಬ್ಯಾಟಿಂಗ್ಗೆ ಕಳುಹಿಸಲ್ಪಟ್ಟ ಗುಜರಾತ್ ತಂಡವನ್ನು, ಲಖನೌ ನಿಧಾನಗತಿಯ ಬೌಲರ್ಗಳು 6 ವಿಕೆಟ್ಗೆ 180 ರನ್ಗಳಿಗೆ ಸೀಮಿತಗೊಳಿಸಿದ್ದರು. ಸಾಯಿ ಸುದರ್ಶನ್ (56, 37ಎ, 4×7, 6×1) ಮತ್ತು ನಾಯಕ ಶುಭಮನ್ ಗಿಲ್ (60, 38ಎ, 4×6, 6×1) ಮೊದಲ ವಿಕೆಟ್ಗೆ 12 ಓವರುಗಳಲ್ಲಿ 120 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು.
ಆದರೆ ನಂತರದ ಎಂಟು ಓವರುಗಳಲ್ಲಿ ಗುಜರಾತ್ ಕೇವಲ 60 ರನ್ಗಳಷ್ಟೇ ಗಳಿಸಲಷ್ಟೇ ಶಕ್ತವಾಯಿತು. ಆರು ವಿಕೆಟ್ಗಳನ್ನೂ ಕಳೆದುಕೊಂಡಿತು. ಸ್ಪಿನ್ನರ್ಗಳಾದ ರವಿ ಬಿಷ್ಣೋಯಿ (36ಕ್ಕೆ2), ದಿಗ್ವೇಶ್ ರಾಠಿ (30ಕ್ಕೆ1) ಲಖನೌ ಮರಳಿ ಹಿಡಿತ ಪಡೆಯಲು ಕಾರಣರಾದರು.
ಸಂಕ್ಷಿಪ್ತ ಸ್ಕೋರು:
ಗುಜರಾತ್ ಟೈಟನ್ಸ್: 20 ಓವರುಗಳಲ್ಲಿ 6 ವಿಕೆಟ್ಗೆ 180 (ಸಾಯಿ ಸುದರ್ಶನ್ 56, ಶುಭಮನ್ ಗಿಲ್ 60, ಶೆರ್ಫೇನ್ ರುದರ್ಫೋರ್ಡ್ 22; ಶಾರ್ದೂಲ್ ಠಾಕೂರ್ 34ಕ್ಕೆ2, ರವಿ ಬಿಷ್ಣೋಯಿ 36ಕ್ಕೆ2);
ಲಖನೌ ಸೂಪರ್ ಜೈಂಟ್ಸ್: 20 ಓವರುಗಳಲ್ಲಿ 4 ವಿಕೆಟ್ಗೆ 186 (ಏಡನ್ ಮರ್ಕರಂ 58, ರಿಷಭ್ ಪಂತ್ 21, ನಿಕೋಲಸ್ ಪೂರನ್ 61, ಆಯುಷ್ ಬಡೋನಿ ಔಟಾಗದೇ 28; ಪ್ರಸಿದ್ಧ ಕೃಷ್ಣ 26ಕ್ಕೆ2)