ಸುಳ್ಯ:ಸುಳ್ಯ ಲಯನ್ಸ್ ಕ್ಲಬ್, ಲಯನ್ಸ್ ಪ್ರಾಂತ 5ರ ವತಿಯಿಂದ ಲಯನ್ಸ್ ಪ್ರಾಂತೀಯ ಸಮ್ಮೇಳನ ‘ವರ್ಣ’ ಫೆ.22ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಿತು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ಎಸ್.ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ಧರು.ಪ್ರಾಂತೀಯ ಅಧ್ಯಕ್ಷರ ಪತ್ನಿ ಪ್ರಾಂತ್ಯದ ಪ್ರಥಮ ಮಹಿಳೆ ವೇದಾವತಿ ಜಿ.ರೈ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಲಯನ್ಸ್ ಮಾಜಿ

ಮಲ್ಟಿಪಲ್ ಕೌನ್ಸಿಲ್ ಚೆಯರ್ಮೆನ್ ವಸಂತಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಅತಿಥಿಯಾಗಿದ್ದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ. ಮುಖ್ಯ ಭಾಷಣ ಮಾಡಿದರು. ಪ್ರಾಂತ್ಯ ರಾಯಭಾರಿ ರೇಣುಕಾ ಸದಾನಂದ ಜಾಕೆ, ವಲಯ 1ರ ಅಧ್ಯಕ್ಷೆ ರೂಪಶ್ರೀ ಜೆ ರೈ, ವಲಯ 2ರ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ವಲಯ 1ರ ಪ್ರತಿನಿಧಿ ಅಮೃತ ಅಪ್ಪಣ್ಣ, ವಲಯ 2ರ ಪ್ರತಿನಿಧಿ ದಿನೇಶ್ ಆಚಾರ್ಯ, ವಿವಿಧ ಪ್ರಾಂತೀಯ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಬಿ.ಪವನ್ರಾಮ್, ಪ್ರಾಂತೀಯ ಸಮ್ಮೇಳನ

ಸಂಘಟನಾ ಸಮಿತಿಯ ಅಧ್ಯಕ್ಷ ಎನ್.ಜಯಪ್ರಕಾಶ್ ರೈ
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಖಜಾಂಜಿ ರಮೇಶ್ ಶೆಟ್ಟಿ, ಪ್ರಾಂತೀಯ ಸಮ್ಮೇಳನ ಸಂಘಟನಾ ಸಮಿತಿಯ ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಖಜಾಂಜಿ ದೊಡ್ಡಣ್ಣ ಬರೆಮೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಂಘಟನಾ ಸಮಿತಿಯ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಸ್ವಾಗತಿಸಿದರು.
ಸಮ್ಮೇಳನದ ಅಂಗವಾಗಿ ಪ್ರಾಂತ್ಯದ ಎಲ್ಲಾ ಕ್ಲಬ್ಗಳ ಬ್ಯಾನರ್ ಪ್ರೆಸೆಂಟೇಷನ್ ಫನ್ ಗೇಮ್ಸ್, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಂತ್ಯದ 7 ಲಯನ್ಸ್ ಕ್ಲಬ್ ವ್ಯಾಪ್ತಿಯ ಲಯನ್ಸ್ ಸದಸ್ಯರಲ್ಲದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಗೀತಾ ಎಸ್.ಶೆಟ್ಟಿ, ರೀಟಾ ಕರುಂಬಯ್ಯ ಕಾರ್ಯಕ್ರಮ ನಿರೂಪಿಸಿದರು.

