ಸುಳ್ಯ:ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಬೆಂಗಳೂರು ಇದರ ರಾಜ್ಯ ನಿರ್ದೇಶಕರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅವರ ನೇತೃತ್ವದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕರ್ನಾಟಕ, ಬೆಂಗಳೂರು ಇದರ ಆಯುರ್ವೇದ ಪದವಿ ವಿಭಾಗದ
ಅಧ್ಯಯನ ಮಂಡಳಿಯ ಚೇರ್ಮ್ಯಾನ್ ಆಗಿ ನೇಮಕಗೊಂಡಿರುವ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ
ಡಾ. ಲೀಲಾದರ್ ಡಿ. ವಿ ಯವರನ್ನು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅಭಿನಂದನಾ ಸಮಿತಿಯ ಕೋಶಾಧಿಕಾರಿ ಕೆ. ಟಿ ವಿಶ್ವನಾಥ, ಜೊತೆ ಕಾರ್ಯದರ್ಶಿಗಳಾದ ಸುಪ್ರೀತ್ ಮೋಂಟಡ್ಕ, ಪ್ರೀತಮ್ ಕೇರ್ಪಳ, ಪಾತಿಕಲ್ಲು ಕಂಟ್ರಕ್ಷನ್ ಮಾಲಕ ಮಿಲನ್ ಪಾತಿಕಲ್ಲು ಉಪಸ್ಥಿತರಿದ್ದರು