ಸುಳ್ಯ:ಕರ್ನಾಟಕ ರಾಜ್ಯ ಕಾನೂನು ವಿವಿ ಮತ್ತು ಕೆವಿಜಿ ಕಾನೂನು ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಕೆವಿಜಿ ಕ್ರೀಡಾoಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಾನೂನು ವಿವಿ ಮಟ್ಟದ ಫುಟ್ಬಾಲ್ ಪಂದ್ಯಾಟ ಸಮಾಪನಗೊಂಡಿತು. ಪಂದ್ಯಾಟದಲ್ಲಿ ಕ್ರೈಸ್ಟ್ ಲಾ ಕಾಲೇಜು ಬೆಂಗಳೂರು (ಪ್ರಥಮ), ಎಂ ಎಸ್ ರಾಮಯ್ಯ ಲಾ ಕಾಲೇಜು ಬೆಂಗಳೂರು (ದ್ವಿತೀಯ),
ಎಸ್ ಡಿ ಎಂ ಲಾ ಕಾಲೇಜು ಮಂಗಳೂರು(ತೃತೀಯ), ಕೆ. ಎಲ್. ಇ. ಲಾ ಕಾಲೇಜು, ಬೆಂಗಳೂರು (ಚತುರ್ಥ)ಸ್ಥಾನ ಪಡೆದು ವಿಜಯಿಯಾದರು. ಬೆಸ್ಟ್ ಗೋಲ್ ಕೀಪರ್ ಆಗಿ
ಗೌರವ್ ಲಾಲ್, ಕ್ರೈಸ್ಟ್ ಲಾ ಕಾಲೇಜು ಬೆಂಗಳೂರು, ಬೆಸ್ಟ್ ಡಿಫೆಂಡರ್ ಆಗಿ ತಂಗಮಿನ್ ಸೆಮ್ ಕೋನ್ಗಸೈ, ಕ್ರೈಸ್ಟ್ ಲಾ ಕಾಲೇಜು ಬೆಂಗಳೂರು, ಹಾಗೂ ಬೆಸ್ಟ್ ಪ್ಲೇಯರ್ ಆಗಿ ಫಾಕ್ಯೂ, ಎಂ ಎಸ್ ರಾಮಯ್ಯ ಲಾ ಕಾಲೇಜು, ಬೆಂಗಳೂರು ಇವರು ಹೊರಹೊಮ್ಮಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ಬಹುಮಾನ ವಿತರಿಸಿದರು. ಕೆವಿಜಿ ಕಾನೂನು ಕಾಲೇಜಿನ

ಆಡಳಿತಾಧಿಕಾರಿ ಪ್ರೊ.ಕೆ.ವಿ.ದಾಮೋದರ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ ಉದಯ ಕೃಷ್ಣ ಬಿ., ಉಪನ್ಯಾಸಕಿ, ಕ್ರೀಡಾ ಸಂಯೋಜಕಿ ರಶ್ಮಿ ಹೆಚ್, ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ, ಎನ್ನೆoಸಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಲೆ. ಸೀತಾರಾಮ ಎಂ ಡಿ, ಕೆವಿಜಿ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಿಥನ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ
ರಮ್ಯ ಮತ್ತು ಬಳಗದವರು ಪ್ರಾರ್ಥಿಸಿ, ಪ್ರಾoಶುಪಾಲರಾದ ಡಾ ಉದಯ ಕೃಷ್ಣ ಬಿ ಸ್ವಾಗತಿಸಿ, ಉಪನ್ಯಾಸಕಿ ರಶ್ಮಿ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ನಿರೂಪಿಸಿ, ವಿದ್ಯಾರ್ಥಿನಿ ಯಶಸ್ವಿನಿ ವಿಜೇತರ ಪಟ್ಟಿ ವಾಚಿಸಿದರು.