ಸುಳ್ಯ:ಕೆವಿಜಿ ಐಪಿಎಸ್ 2024 -25 ರ ವಾರ್ಷಿಕ ಕ್ರೀಡಾಕೂಟ ನವೆಂಬರ್ 15 ಮತ್ತು 16 ರಂದು ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಯ ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕ್ರೀಡೋತ್ಸವವನ್ನು ಉದ್ಘಾಟಿಸಿದರು.ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ
ಕೆ ವಿ ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇದರ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಹಾಗೂ ಎಂಡೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಎಲ್ ಕೃಷ್ಣ ಪ್ರಸಾದ್ ಭಾಗವಹಿಸಿದ್ದರು. ಶಾಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ,ಉಜ್ವಲ್ ಯು ಜೆ ಮಾತನಾಡಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಯ ಕಾರ್ಯದರ್ಶಿ ಜ್ಯೋತಿ ಆರ್ ಪ್ರಸಾದ್, ಕೆವಿಜಿ ಅಮರ ಜ್ಯೋತಿ ಪಿ ಯು ಸಿ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಐಟಿಐ ಪ್ರಾಂಶುಪಾಲರಾದ ಚಿದಾನಂದ ಬಾಳಿಲ, ಪ್ರಸನ್ನ ಕಲ್ಲಾಜೆ, ಐಪಿಎಸ್ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ಹಾಗೂ ಶಾಲಾ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕ್ರೀಡೋತ್ಸವದ ಎರಡನೆಯ ದಿನದಂದುಶಾಲೆಯ ಎಲ್ಲಾ ಸಿಬ್ಬಂದಿ
ವರ್ಗದವರಿಗೆ ಕ್ರೀಡೆಗಳನ್ನು ಆಯೋಜಿಸಲಾಯಿತು. ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ ವಂದನಾರ್ಪಣೆಗೈದರು.ಧೈಹಿಕ ಶಿಕ್ಷಕರುಗಳಾದ ಪ್ರಶಾಂತ್ ಹಾಗೂ ಆಶಾಜ್ಯೋತಿ ಕ್ರೀಡಾ ಕೂಟಕ್ಕೆ ನಿರ್ದೇಶನ ನೀಡಿದರು.