ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕೆವಿಜಿ ಐಟಿಐ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜು ಜಂಟಿಯಾಗಿ 79ನೇ ಸ್ವಾತಂತ್ರ್ಯೋತ್ಸವ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕೆವಿಜಿ ಐಪಿಎಸ್ನ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಮಾಜಿ ಸುಬೇದಾರ್ ತಿರುಮಲೇಶ್ವರ ಎಸ್ ಧ್ವಜಾರೋಹಣ ನೆರವೇರಿಸಿದರು. ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ‘ಬಿ ‘ ವಿಭಾಗದ ನಿರ್ದೇಶಕಿ ಡಾ. ಅಭಿಜ್ಞ ಕೆ. ಆರ್ ಶುಭ ಹಾರೈಸಿದರು.ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ
ವಿದ್ಯಾರ್ಥಿನಿ ಸೃಷ್ಟಿ ಕೆ ಎಸ್ ಸ್ವಾತಂತ್ರ್ಯ ಆಚರಣೆಯ ಕುರಿತು ತಿಳಿಸಿದರು. ವಿದ್ಯಾರ್ಥಿನಿ ಸಂಜನಾ ಎಂ. ಅತಿಥಿ ಪರಿಚಯ ಮಾಡಿದರು.
ಬಳಿಕ ಕೆವಿಜಿ ಐಪಿಎಸ್ನ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.ವಿದ್ಯಾರ್ಥಿಗಳಾದ ಸ್ಕಂದ ದಿಯಾ ಪಿ ಕಲ್ಲಾಜೆ ಸ್ವಾಗತಿಸಿ ಅಲಿಸ್ಬ ಸಾರ ಮತ್ತು ಸಮರ್ಥ ಡಿ ರಾಜ್ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳು ಕೃಷ್ಣನ ಮಹತ್ವವನ್ನು ಸಾರುವ ನೃತ್ಯ ಪ್ರದರ್ಶಿಸಿದರು. ಅಮೇಯ ಭಾರದ್ವಾಜ್, ಐಶಾನಿ ಸ್ವಾತಂತ್ರ್ಯೋತ್ಸವ ಕೃಷ್ಣಾಸ್ಟಮಿ ಕುರಿತು ಮಾತನಾಡಿದರು. ಅಥರ್ವ ನಿರೂಪಿಸಿ ಮೋಹಕ್ ಕೆ ವಂದಿಸಿದನು.ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ವಿಭಾಗದ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್, ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಉಪ ಪ್ರಾಂಶುಪಾಲ ದೀಪಕ್ ವೈ ಆರ್, ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ದಿನೇಶ್ ಮಡ್ತಿಲ, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ವಿಭಾಗದ ಆಡಳಿತಾಧಿಕಾರಿ ಭವಾನಿ ಶಂಕರ್ ಅಡ್ತಲೆ, ಪ್ರಸನ್ನ ಕಲ್ಲಾಜೆ, ಪೋಷಕ ವೃಂದ, ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.














