ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ‘ವಿದ್ಯಾರ್ಥಿಗಳ ಮಾತಿನ ಕೌಶಲ್ಯ ಮತ್ತು ಜ್ಞಾನದ ಬೆಳವಣಿಗೆಗೆ ಗುಂಪು ಚರ್ಚಾ ಕಾರ್ಯಾಗಾರ ಆಯೋಜಿಸಲಾಯಿತು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ಡಿಪಾರ್ಟ್ಮೆಂಟ್ ನ ಪ್ರೊ. ಪ್ರಶಾಂತ್ ಕೆ ಅವರು ತರಬೇತುದಾರರಾಗಿ ಆಗಮಿಸಿ, “ವಿದ್ಯಾರ್ಥಿಗಳಿಗೆ ಗುಂಪು ಚಟುವಟಿಕೆಯ ಕುರಿತು
ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಹತ್ತನೇ ತರಗತಿಯ ಆದಿತ್ ರೈ,ಅನೀಶ್, ಅದ್ವೈತ್, ಉತ್ಸವ್, ಧನ್ವಿ, ಸಾನ್ವಿ ಮತ್ತು ಸಮೃದ್ಧಿಯು ರಾಷ್ಟ್ರೀಯ ಹೊಸ ಶಿಕ್ಷಣ ನೀತಿ -2020 ಎಂಬ ವಿಷಯದ ಬಗ್ಗೆ ಗುಂಪು ಚರ್ಚೆ ನಡೆಸಿದರೆ, 9ನೇ ತರಗತಿಯ ವಿದ್ಯಾರ್ಥಿಗಳಾದ ಸಲ್ಮಾನುಲ್ ಫಾರೀಸ್, ಕೃತಾರ್ಥ್, ಮನ್ವಿತಾ, ಶ್ರದ್ಧ ಪೈ, ಸೋನಾ ನಾರ್ಕೋಡು ಮತ್ತು ಅಲಿಸ್ಬ ಸಾರಾ ಜಾಗತಿಕ ತಾಪಮಾನಕ್ಕೆ ಕಾರಣ, ಪರಿಣಾಮ ಮತ್ತು ಅದರ ಪರಿಹಾರದ ಬಗ್ಗೆ ಗುಂಪು ಚರ್ಚೆ ನಡೆಸಿದರು.ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಅಧ್ಯಯನದಲ್ಲಿ ಗುಂಪು ಚರ್ಚೆಯ ಮಹತ್ವದ ಕುರಿತು ಮಾತನಾಡಿದರು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ಆಕಾಶ್, ಪ್ರೊ. ರಮ್ಯ, ಪ್ರೊ. ಶ್ರುತಿ ಕೆವಿಜಿ ಐಪಿಎಸ್ನ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ , ಶಾಲಾ ಸಾಂಸ್ಕೃತಿಕ ಸಂಯೋಜನಾಧಿಕಾರಿ ಪ್ರಜ್ಞಾ ಡಿ.ಆರ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಎಂಟನೇ ತರಗತಿಯ ನಮೀಷ್ ಮತ್ತು ಮನಸ್ವಿ ನಿರೂಪಿಸಿ, ನಿನಾದ ವಂದಿಸಿದಳು.