ಸುಳ್ಯ: ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕಿ ಡಾ.ರಮ್ಯ ಎಂ.ಕೆ. ಪ್ರಾಸಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಯವರು ಮಹಿಳೆಯರಿಗೆ ಸಮಾನತೆ ಹಾಗೂ
ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಜವಬ್ದಾರಿಯ ಬಗ್ಗೆ ಮಾತನಾಡಿದರು ಹಾಗೂ ಮಹಿಳೆಯರು ಈಗಿನ ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸಿದ್ದಾರೆ ಎಂದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮೋಕ್ಷಾ ನಾಯಕ್ ಮಾತನಾಡಿ ಮಹಿಳೆಯರ ಸಮಾನತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಸಭೆಯನ್ನು ಉದ್ಧೇಶಿಸಿ ಉಪಪ್ರಾಂಶುಪಾಲರಾದ ಡಾ. ಶೈಲಾ ಎಂ.ಪೈ ಮಾತನಾಡಿದರು. ಈ ಸಂದರ್ಭದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಯಿಯ ಪ್ರಾಮುಖ್ಯತೆಯನ್ನು ಸಾರುವ ನೃತ್ಯವನ್ನು ಪ್ರದರ್ಶಿಸಲಾಯಿತು. ಸಹ ಸಂಯೋಜಕಿ ಡಾ.ರೋಹಿತ ಆನ್ ತೋಮಸ್ ವಂದಿಸಿದರು.