ಸುಳ್ಯ : ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ, ಹಾಗೂ ಆಯುಷ್ ಇಲಾಖೆ ಮಂಗಳೂರು ಇದರ ಸಹಯೋಗದೊಂದಿಗೆ 10ನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಕೌನ್ಸಿಲ್ ಮೆಂಬರ್ ಜಗದೀಶ ಅಡ್ತಲೆ, ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಹರ್ಷಿತಾ ಎಂ., ಸಂಸ್ಥೆಯ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕರಾದ ಡಾ. ಕವಿತಾ ಬಿ. ಎಂ., ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಜಯವಾಣಿ ಯಂ. ಜಿ., ಡಾ. ಶಭೀನಾ ಟಿ. ಟಿ. ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗಣ್ಯ ಅತಿಥಿಗಳು, ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಪ್ರಮೋದ್ ಪಿ. ಎ. ಹಾಗೂ ಸಂಸ್ಥೆಯ ಬೋದಕ, ಬೋದಕೇತರ ಸಿಬ್ಬಂದಿಗಳಿಂದ, ವಿದ್ಯಾರ್ಥಿಗಳಿಂದ ತೆರೆದ ಮೈದಾನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ಡಾ. ಮಹಂತ್ ರಾಜ್, ನಿತ್ಯಾದಾಸ್,ಕೃಪಾ,
ಅರ್ಚನಾ ಎಸ್, ಬಿಂದುಶ್ರೀ ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಜಯವಾಣಿ ಯಂ. ಜಿ., ಡಾ. ಶಭೀನಾ ಟಿ. ಟಿ. ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಐಶ್ವರ್ಯ ಬಾಲಗೋಪಾಲ್ ಇವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಕೆವಿಜಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕೂಡ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದು,
ಕೆವಿಜಿ ಸಮೂಹ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಯೋಗ ಪೋಟೋಗ್ರಾಫಿ ಸ್ಪರ್ಧೆಯಲ್ಲಿ– ಪ್ರಥಮ ಬಹುಮಾನವನ್ನು ಕೆವಿಜಿ ಮೆಡಿಕಲ್ ಕಾಲೇಜಿನ 4ನೇ ವರ್ಷದ ಬಿ.ಎಸ್.ಸಿ ಅರವಳಿಕೆ ಮತ್ತು ಓಟಿ ಟೆಕ್ನಾಲಾಜಿಯ ತಹಸ್ನಿಮಾ ಎಸ್. ದ್ವಿತೀಯ ಬಹುಮಾನವನ್ನು ಕೆ.ವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಪತ್ ಎಸ್. ಹಿರೇಮಠ್ ಪಡೆದುಕೊಂಡರು.
ಇ-ಪೋಸ್ಟಾರ್ ಸ್ಪರ್ಧೆಯಲ್ಲಿ – ಪ್ರಥಮ ಬಹುಮಾನವನ್ನು, ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಮೋಕ್ಷ್ ಡಿ. ಎಲ್., ದ್ವಿತೀಯ ಬಹುಮಾನವನ್ನು ನೆಹರೂ ಮೆಮೋರಿಯಲ್ ಕಾಲೇಜಿನ ಅಂತಿಮ ಬಿ.ಎಸ್.ಸಿ ವಿಭಾಗದ ಲಿಖಿತಾ ಎನ್. ಜಿ., ಪಡೆದುಕೊಂಡರು.
ಸಂಸ್ಥೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪೋಸ್ಟಾರ್ ಮೇಕಿಂಗ್ ಸ್ಪರ್ಧೆಯಲ್ಲಿ – ಪ್ರಥಮ ಬಹುಮಾನವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದಿಶಾ ಎ. ಎ. ಮತ್ತು ಅದಿತಿ ಕೆ. ಕೆ. ದ್ವಿತೀಯ ಬಹುಮಾನವನ್ನು ಸ್ವಾತಿ ಆರ್. ಎನ್, ಮತ್ತು ಯಂ. ಯಂ. ಲಾವಣ್ಯ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ – ಪ್ರಥಮ ಬಹುಮಾನವನ್ನು ಅಮೂಲ್ಯ ಹೊಸಮನಿ, ದ್ವಿತೀಯ ಬಹುಮಾನವನ್ನು ಚಿಂತನ ಎನ್. ಎಸ್., ಪಡೆದುಕೊಂಡರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕುರುಂಜಿಭಾಗ್, ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ಇವರು ನೆರವೇರಿಸಿದರು.
ಕಾಲೇಜಿನ ಎಲ್ಲಾ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಡಾ. ಅನುಷಾ ಯಂ., ನಿರೂಪಿಸಿದರು.