ಸುಳ್ಯ:ಸುಳ್ಯದ ಕುರುಂಜಿಭಾಗ್ನಲ್ಲಿ ಕೆ.ವಿ.ಜಿ. ಅಮರಜ್ಯೋತಿ ಪಿಯು ಕಾಲೇಜು, ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಕೆ.ವಿ.ಜಿ. ಐಟಿಐಗಳ ಸಹಭಾಗಿತ್ವದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಎ.ಒ.ಎಲ್.ಇ ಕಮಿಟಿ ‘ಬಿ’, ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ವಹಿಸಿದ್ದರು. ನಿವೃತ್ತ ಸೈನಿಕರಾದ ಕಮಲಾಕ್ಷ ಪಿ.ಜೆ. ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋಧಾ ರಾಮಚಂದ್ರ, ಕೆವಿಜಿ ಐಪಿಎಸ್ ಪ್ರಾಂಶುಪಾಲ ಅನೀಶ್ ನಾದ್, ಐಟಿಐ ಪ್ರಾಂಶುಪಲಾ ದಿನೇಶ್ ಮಡ್ತಿಲ, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ್ ಅಡ್ತಲೆ ಹಾಗೂ ಮೂರು ಸಂಸ್ಥೆಗಳ

ಉಪಪ್ರಾಂಶುಪಾಲರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಆಜ್ಞಾ ರೈ ಸ್ವಾಗತಿಸಿ, ಶಿಫಾ ವಂದಿಸಿದರು.ಅಮರಜ್ಯೋತಿ ಪಿಯು ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಶೈಮಾ, ಆಂಗ್ಲಭಾಷಾ ಉಪನ್ಯಾಸಕಿ ಮಲ್ಲಿಕಾ ಎಂ.ಎಲ್. ಹಾಗೂ ಪ್ರಥಮ ವಾಣಿಜ್ಯ ವಿಭಾಗದ ಸ್ಕಂದ ದಿಯಾ ಪಿ. ಕಲ್ಲಾಜೆ ಕಾರ್ಯಕ್ರಮ ನಿರ್ವಹಿಸಿದರು.
ಕೆ.ವಿ.ಜಿ. ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಮೂರು ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.







































