ಸುಳ್ಯ:ಸುಳ್ಯದ ಕುಂ..ಕುಂ.. ಇಂಟರ್ನ್ಯಾಷನಲ್ ವಸ್ತ್ರ ಮಳಿಗೆ ನವೀಕರಣಗೊಂಡು ಉದ್ಘಾಟನೆಗೊಂಡಿದೆ. ಕಟ್ಟಡದ ಮಾಲಕರಾದ ಪ್ರೇಮಲತಾ ಪದ್ಮನಾಭಯ್ಯರು ವಿಸ್ತೃತ ಮಳಿಗೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ದ್ವಾರಕಾ ಹೋಟೆಲ್ ಮಾಲಕ ವಸಂತ್ ಭಟ್, ಸುಳ್ಯ ದ್ವಾರಕಾ ಮೆಡಿಕಲ್ ಮಾಲಕ ಕೆ.ಉಮೇಶ್ ರಾವ್, ಸುಳ್ಯ ರಾಜಶ್ರೀ ಕಾಂಪ್ಲೆಕ್ಸ್ ಮಾಲಕ ಕೆ.ಆರ್. ಕೃಷ್ಣ ರಾವ್, ಸುಳ್ಯ ವರ್ತಕರ ಸಂಘದ
ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ ಭಾಗವಹಿಸಿದ್ದರು.ಸಂಸ್ಥೆಯ ಮಾಲಕರಾದ ಧನ ರಾಮ್, ಭೀಮ್ ರಾಮ್ ಅತಿಥಿಗಳನ್ನು ಸ್ವಾಗತಿಸಿದರು.
ಪ್ರಮುಖರಾದ ರಾಜೇಶ್ ಶೆಟ್ಟಿ ಮೇನಾಲ, ಮಾಧವ ಮಂಗಲ್ಪಾಡಿ, ಸ್ವಾತಿಕ್ ಕಿರ್ಲಾಯ,ಚಂದ್ರಶೇಖರ ನಂಜೆ,ಮೋನಪ್ಪ ಎನ್., ಸದಾನಂದ ಎಂ.ಎಸ್., ಪ್ರವೀಣ್ ರಾವ್, ಜಯರತ್ನ, ಸಂಜೀವ ಗೌಡ, ಮೋಹಿನಿ, ಗೀತಾ ಎಂಕೆ. ಕೊರತ್ಯಡ್ಕ, ವಿಘ್ನೇಶ್ವರ ವಿ ಕಂದಡ್ಕ, ಪಿ. ರಾಧಾಕೃಷ್ಣ ಜಯನಗರ, ಜಯಂತ್ ಹೊಸೂರು, ನಾಗೇಶ್ ಇಂಡಸ್ಟ್ರೀಸ್ ಮಾಲಕ ನಾಗೇಶ್ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು.

ನವೀಕೃತ ಮಳಿಗೆಯ ಉದ್ಘಾಟನೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ವಸ್ತ್ರಗಳನ್ನು ನೀಡಲಾಗುತ್ತದೆ.
ರೂ.499 ಮೇಲಿನ ಖರೀದಿಗೆ ಖಚಿತ ಉಡುಗೊರೆ ಮತ್ತು ಲಕ್ಕಿ ಕೂಪನ್ ನೀಡಲಾಗುತ್ತಿದೆ.ಹಬ್ಬದ ಪ್ರಯುಕ್ತ ಹೊಸ ವಸ್ತ್ರಗಳ ಅಪೂರ್ವ ಸಂಗ್ರಹ ಬಂದಿದೆ. ವಿಸ್ತೃತ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ

ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಲಭ್ಯವಿದೆ. ಸಾರಿ, ಚೂಡಿದಾರ್ ಪೀಸ್ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್ಫಿಟ್ಗಳು, ಪುರುಷರ ಎಲ್ಲಾ ರೀತಿಯ ಉಡುಪುಗಳು ಸೇರಿದಂತೆ ಎಲ್ಲಾ ಬಗೆಯ ಉಡುಪುಗಳು ಅತಿ ಕಡಿಮೆ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
















