ಸಂಪಾಜೆ: ಭಾ.ಕೃ.ಸಂ.ಪ. ಅ. ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ಹಾಗೂ ಶ್ರೀ ವಿಷ್ಣು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಸಂಪಾಜೆ-ಕಲ್ಲುಗುಂಡಿ ಇವರ ಸಹಯೋಗದಲ್ಲಿ ‘ಆರೋಗ್ಯವಂತ ಮಣ್ಣು, ಸಶಕ್ತ ರೈತ, ಸಮೃದ್ಧ ಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ
ಹಿರಿಯ ವಿಜ್ಞಾನಿಗಳಾದ ಡಾ. ಈರದಾಸಪ್ಪ,ಡಾ. ಸಿದ್ದಪ್ಪ ಹಾಗೂ ಡಾ.ಅಶ್ವತಿ ಚಂದ್ರಕುಮಾರ್ ಅವರು ಮಣ್ಣಿನ ಆರೋಗ್ಯ, ಸುಸ್ಥಿರ ಕೃಷಿ ಪದ್ಧತಿಗಳು ಹಾಗೂ ರೈತರ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ದೇವಕಿ, ಕಾರ್ಯದರ್ಶಿ ಲಲನ, ಉಪಾಧ್ಯಕ್ಷೆ ಯಮುನಾ ಬಿ.ಎಸ್, ಮಾಜಿ ಉಪಾಧ್ಯಕ್ಷ ಎಸ್.ಕೆ. ಹನೀಫ್, ವಲಯ ಮೇಲ್ವಿಚಾರಕರು ರೂಪ, ಮಾಜಿ ಅಧ್ಯಕ್ಷೆ ಸುಂದರಿ ಮುಂಡಡ್ಕ, ವಿಮಲಾ, ಎಲ್ಸಿಆರ್ಪಿ ಸೌಮ್ಯ, ಭಾರತಿ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಸ್ವಾಗತಿಸಿ, ಎಂ.ಬಿ.ಕೆ. ಕಾಂತಿ ಬಿ.ಎಸ್. ವಂದಿಸಿದರು. ರೈತರಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.







