ಸುಳ್ಯ: ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತ ಉಂಟಾಗುತ್ತಿದ್ದು ಕೃಷಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದುದರಿಂದ ವಿದ್ಯುತ್ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ಸುಳ್ಯ ತಾಲೂಕು ಕೃಷಿಕ ಸಮಾಜದ ವತಿಯಿಂದ ಮೆಸ್ಕಾಂಗೆ ಮನವಿ ಸಲ್ಲಿಸಲಾಗಿದೆ. ಕೃಷಿಕ ಸಮಾಜದ ಅಧ್ಯಕ್ಷ ಕುಸುಮಾಧರ ಎ.ಟಿ.ಕುಸುಮಾಧರ ಅವರ ನೇತೃತ್ವದಲ್ಲಿ ಮೆಸ್ಕಾಂ
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಅವರಿಗೆ ಮನವಿ ಸಲ್ಲಿಸಿದ್ದಾರೆ.ಸುಳ್ಯ ತಾಲೂಕಿನಲ್ಲಿ ಅನಿಮಿಯತ ವಿದ್ಯುತ್ ವ್ಯತ್ಯಯ, ಕಡಿಮೆ ವೋಲ್ವೇಜ್ ಗ್ರಾಮೀಣ ಪ್ರದೇಶದಲ್ಲಿ ತ್ರಿಫೇಸ್ ವಿದ್ಯುತ್ ವ್ಯತ್ಯಯ ಮೊದಲಾದವುಗಳಿಂದ ಕೃಷಿಕರಿಗೆ ತುಂಬಾ ತೊಂದರೆಯುಂಟಾಗಿ ಅಡಿಕೆ ಬೆಳೆಗೆ ದೊಡ್ಡ ಹೊಡೆತ ಉಂಟಾಗಿದೆ. ಇಲ್ಲಿಯ ಕೃಷಿಕರ ಜೀವನಾಧಾರವೇ ಅಡಿಕೆ ಬೆಳೆ ಅಡಿಕೆ ಮರವು ಫೆಬ್ರವರಿ ತಿಂಗಳನಲ್ಲಿಯೇ ಒಣಗಿಸುವ ಸ್ಥಿತಿಗೆ ಬರುತ್ತಿದೆ. ಅಲ್ಲದೇ ಈ ಸಮಯವು ಶಾಲಾ ಮತ್ತು

ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುತ್ತದೆ. ವಿದ್ಯುತ್ ವ್ಯತ್ಯಯದಿಂದ ಮಕ್ಕಳ ಪರೀಕ್ಷೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದುದರಿಂದ ಕೃಷಿಕರ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಹಳ್ಳಿಗಳಿಗೆ ನಿಯಮಿತ ಸಮಯಕ್ಕೆ ತ್ರಿಫೇಸ್ ಮತ್ತು ಸರಿಯಾದ ವೋಲ್ವೇಜ್ ಕೊಡಬೇಕು ಅದೇ ರೀತಿ ಮಕ್ಕಳ ಚಟುವಟಿಕೆಗಾಗಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ಪ್ರಧಾನ ಕಾರ್ಯದರ್ಶಿ ಶ್ಯಾಮ್ಪ್ರಸಾದ್ ಅಡ್ಡಂತ್ತಡ್ಕ, ಕೋಶಾಧಿಕಾರಿ ಸವಿನ್ ಕಡಪಳ, ನಿರ್ದೇಶಕರಾದ ಮನ್ಮಥ.ಎ.ಎಸ್, ರುಕ್ಮಯ್ಯ ಗೌಡ ಎಸ್.ಎನ್, ಕೆ. ಸುಧಾಕರ ಪ್ರಭು, ನಾರಾಯಣ ಆಲಂಕಳ್ಯ, ಪ್ರಮುಖರಾದ ರಾಜೇಶ್ ಮೇನಾಲ, ಸುಪ್ರೀತ್ ಮೋಂಟಡ್ಕ, ಜಗನ್ನಾಥ ಜಯನಗರ, ಆಶೋಕ್ ಅಡ್ಕಾರ್, ನಾರಾಯಣ ಎಸ್.ಎಂ, ನವೀನ್ ಕುದ್ಪಾಜೆ, ಕಿಶೋರ್ ಕಾಯರ್ತೋಡಿ ಮತ್ತಿತರರು ಉಪಸ್ಥಿತರಿದ್ದರು.