ಫಿಲಡೆಲ್ಪಿಯ: ಫಿಫಾ ವಿಶ್ವಕಪ್ನ ತಮ್ಮ ಎರಡನೇ ಪಂದ್ಯದಲ್ಲಿ ಬ್ರೆಝಿಲ್ ತಂಡಕ್ಕೆ ಭರ್ಜರಿ ಜಯ.ಮೊದಲ ಪಂದ್ಯದ ಡ್ರಾ ಮೂಲಕ ಉಂಟಾದ ನಿರಾಸೆಯಿಂದ ಹೊರ ಬಂದ ಬ್ರೆಝಿಲ್ ನಿರ್ಣಾಯಕ ಪಂದ್ಯದಲ್ಲಿ ಹೆಯ್ಟಿ ತಂಡದ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು.ಬ್ರೆಝಿಲ್ ಪರ
ಮತ್ತೇವೂಸ್ ಕೂನ್ಯ ಎರಡು ಗೋಲು ಬಾರಿಸಿದರೆ, ವಿನಿಸ್ಯೂಸ್ ಜೂನಿಯರ್ ಮತ್ತೊಂದು ಗೋಲು ಬಾರಿಸಿದರು.
ಇನ್ನೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ವಿರುದ್ಧ ಮೊರೊಕ್ಕೊ 1-0 ಅಂತರದ ಜಯ ಸಾಧಿಸಿ ನಾಕೌಟ್ನತ್ತ ಹೆಜ್ಜೆ ಇಟ್ಟಿದೆ.ಮೊರೊಕ್ಕೊ ತಂಡದ ಸ್ಟಾರ್ ಆಟಗಾರ ಇಸ್ಮಾಯಿಲ್ ಸೈಬರಿ ಪಂದ್ಯ ಆರಂಭವಾಗಿ ಕೇವಲ 71 ಸೆಕೆಂಡುಗಳಲ್ಲಿ ಗೋಲು ಬಾರಿಸುವ ಮೂಲಕ ಪ್ರಸಕ್ತ ಫಿಫಾ ವಿಶ್ವಕಪ್ನಲ್ಲಿ ಅತ್ಯಂತ ವೇಗದ ಗೋಲು ದಾಖಲಿಸಿದ್ದಾರೆ.
ನಿರಂತರ ಎರಡನೇ ಜಯ ದಾಖಲಿಸಿದ ಯುಎಸ್ಎ ನಾಕೌಟ್ ಹಂತ ಪ್ರವೇಶಿಸಿದೆ. ಅಮೇರಿಕ ತಂಡ ಆಸ್ಟ್ರೇಲಿಯಾ ವಿರುದ್ಧ2-0 ಅಂತರದ ಗೆಲುವು ಸಾಧಿಸಿದೆ.







