ಕೋಲ್ಕತ್ತ: ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಏಳು ವಿಕೆಟ್ಗಳಿಂದ ಸೋಲಿಸಿ ಪ್ಲೇ ಆಫ್ ಹಾದಿಯತ್ತ ಹೆಜ್ಜೆಯಿಟ್ಟಿತು.ಇದು ಕೋಲ್ಕತ್ತ ತಂಡಕ್ಕೆ ಒಂಬತ್ತು ಪಂದ್ಯಗಳಿಂದ ಆರನೇ ಗೆಲುವಾಗಿದ್ದು, ಒಟ್ಟು 12 ಅಂಕ ಸಂಪಾದಿಸಿದೆ. ಡೆಲ್ಲಿ ತಂಡವು
11 ಪಂದ್ಯಗಳಿಂದ 10 ಪಾಯಿಂಟ್ಸ್ ಸಂಗ್ರಹಿಸಿದ್ದು, ಪ್ಲೇ ಆಫ್ ಹಾದಿ ಕಠಿಣವಾಗಿದೆ.
ಈಡನ್ ಗಾರ್ಡನ್ನಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ಗೆ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಕೋಲ್ಕತ್ತ ತಂಡವು ಇನ್ನೂ 21 ಎಸೆತ ಬಾಕಿ ಇರುವಂತೆ
3 ವಿಕೆಟ್ಗಳಿಗೆ 157 ರನ್ ಗಳಿಸಿತು. ಫಿಲ್ ಸಾಲ್ಟ್ (68; 33ಎ) ಆಕ್ರಮಣಕಾರಿ ಅರ್ಧಶತಕ ಬಾರಿಸಿದರು.
ಸಾಲ್ಟ್ ಮೊದಲ ವಿಕೆಟ್ಗೆ ಸುನಿಲ್ ನಾರಾಯಣ್ ಜತೆ 6.1 ಓವರ್ಗಳಲ್ಲೇ
79 ರನ್ ಸೇರಿಸಿ ಭದ್ರ ಬುನಾದಿ ಹಾಕಿದರು. ಸಾಲ್ಟ್ 7 ಬೌಂಡರಿ ಮತ್ತು ಐದು ಸಿಕ್ಸರ್ ಸಿಡಿಸಿದರು.ನಂತರ ನಾಯಕ ಶ್ರೇಯಸ್ ಅಯ್ಯರ್ (ಔಟಾಗದೇ 33) ಮತ್ತು ವೆಂಕಟೇಶ್ |
ಅಯ್ಯರ್ (ಔಟಾಗದೇ 26) ಗೆಲುವಿನ ದಡ ಸೇರಿಸಿದರು.
ದೆಹಲಿ ಕ್ಯಾಪಿಟಲ್ಸ್ ಪರ ಕುಲದೀಪ್ ಯಾದವ್ ಸ್ವಲ್ಪ ಪ್ರತಿರೋಧ ತೋರಿದರು. ಅವರೇ ಅತಿ ಹೆಚ್ಚು ರನ್ (ಔಟಾಗದೇ 35, 26ಎ) ಗಳಿಸಿದರಲ್ಲದೇ, ತಂಡ 150ರ ಗಡಿ ದಾಟಲು ನೆರವಾದರು.