ಸುಳ್ಯ: ಸುಳ್ಯ ಬೂಡು ಭಗವತಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ‘ಕೆಸರ್ ಡೊಂಜಿ ದಿನ” ಕೆಸರು ಗದ್ದೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜು.20 ರಂದು ನಡೆಯಿತು.ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ಶಾರದಾಂಬ ಸಮೂಹ ಸಮಿತಿಯ ಆಶ್ರಯದಲ್ಲಿ ಭಗವತಿ ಯುವ ಸೇವಾ ಸಂಘ ಬೂಡು ಕೇರ್ಪಳ ಕುರುಂಜಿ ಗುಡ್ಡೆ ,ರೋಟರಿ ಕ್ಲಬ್ ಸುಳ್ಯ ಸಿಟಿ, ಲಯನ್ಸ್ ಕ್ಲಬ್ ಸುಳ್ಯ, ಬಂಟರ ಯಾನೆ ನಾಡವರ ಸಂಘ ಸುಳ್ಯ ತಾಲೂಕು, ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ ತಾಲೂಕು ಇದರ ಸಹಯೋಗದಲ್ಲಿ
ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಅಧ್ಯಕ್ಷತೆ ವಹಿಸಿದ್ದರು.

ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ನ.ಪಂ.ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಎ.ಒ.ಎಲ್.ಇ ಬಿ.ಕಮಿಟಿಯ ಸಿ.ಇ.ಒ ಡಾ.ಉಜ್ವಲ್ ಯು.ಜೆ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕೇರ್ಪಳ,
ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್, ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಮ್ ಮೋಹನ್, ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ದೀಪಕ್ ಕುತ್ತಮೊಟ್ಟೆ, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಹೇಮಂತ್ ಕಾಮತ್, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ರಾಧಾಕೃಷ್ಣ ಬೊಳ್ಳೂರು, ಗಣೇಶ್ ಆಳ್ವ, ಕೆ.ಗೋಕುಲ್ದಾಸ್, ದೊಡ್ಡಣ್ಣ ಬರೆಮೇಲು, ಸತೀಶ್ ಎನ್ ಮತ್ತಿತರರು ಉಪಸ್ಥಿತರಿದ್ದರು.
ಯುಕ್ತಿ ಮತ್ತು ಸ್ಪೂರ್ತಿ ಪ್ರಾರ್ಥಿಸಿದರು.ಉತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿದರು. ಎಸ್.ಸಿಕ್ಸ್ ಕಾರ್ಯದರ್ಶಿ ರಾಜು ಪಂಡಿತ್ ವಂದಿಸಿದರು.ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರ್ವಹಿಸಿದರು.
ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಯಿತು.














