ತಿರುವನಂತಪುರ: ಕೇರಳಂನ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ನೂತನ ಸಚಿವ ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದನ್ನು ಘೋಷಿಸಿದ್ದಾರೆ.ಮೇ 18 ರಂದು ತಿರುವನಂತಪುರದಲ್ಲಿ ನೂತನ ಮುಖ್ಯಮಂತ್ರಿ ಹಾಗು 20 ಸಚಿವರುಗಳು ಪ್ರಮಾಣ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಹಾಗೂ
ಕಾಂಗ್ರೆಸ್ನ 11 ಮಂದಿ ಕಾಂಗ್ರೆಸ್ನಿಂದ ಮುಸ್ಲೀಂ ಲೀಗ್ 5 ಸೇರಿ ಹಾಗು ಇತರ ಮಿತ್ರ ಪಕ್ಷಗಳಿಗೆ ನಾಲ್ಕು ಸ್ಥಾನ ಹಂಚಿಕೆ ಮಾಡಲಾಗಿದೆ.
ಹಿರಿಯ ನಾಯಕರಾದ ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್ ಮತ್ತು ಸನ್ನಿ ಜೋಸೆಫ್ ಸೇರಿದಂತೆ ಪ್ರಮುಖ ನಾಯಕರು ಸತೀಶನ್ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿಳಿಸಿದ್ದಾರೆ.
ಸಚಿವರುಗಳು:
ರಮೇಶ್ ಚೆನ್ನಿತ್ತಲ,ಪಿ.ಕೆ. ಕುಂಞಾಲಿಕುಟ್ಟಿ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಮೋನ್ಸ್ ಜೋಸೆಫ್, ಶಿಬು ಬೇಬಿ ಜಾನ್, ಅನೂಪ್ ಜೇಕಬ್, ಸಿ.ಪಿ. ಜಾನ್, ಎ.ಪಿ. ಅನಿಲ್ ಕುಮಾರ್, ಎನ್. ಶಂಸುದ್ದೀನ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ.ಲಿಜು, ಟಿ. ಸಿದ್ದೀಖ್, ಕೆ.ಎಂ. ಶಾಜಿ, ಪಿ.ಕೆ. ಬಷೀರ್, ವಿ.ಇ. ಅಬ್ದುಲ್ ಗಫೂರ್, ಕೆ.ಎ. ತುಳಸಿ, ಒ.ಜೆ. ಜನೀಶ್ ಸಚಿವರಾಗಲಿದ್ದಾರೆ.
ಹಿರಿಯ ಶಾಸಕ ತಿರುವಂಜೂರು ರಾಧಾಕೃಷ್ಣನ್ ಅವರನ್ನು ವಿಧಾನಸಭೆ ಸಭಾಪತಿ ಮತ್ತು ಶಾನಿಮೋಲ್ ಉಸ್ಮಾನ್ ಅವರನ್ನು ಉಪಸಭಾಪತಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೈತ್ರಿಪಕ್ಷಗಳೊಂದಿಗೆ ಮಾತನಾಡಿ, ಈಗಾಗಲೇ ಖಾತೆಗಳನ್ನು ಕೂಡ ಹಂಚಲಾಗಿದ್ದು, ಕೆಲವು ಚಿಕ್ಕಪುಟ್ಟ ಬದಲಾವಣೆಗಳು ಉಳಿದುಕೊಂಡಿವೆ. ಅಂತಿಮ ಪಟ್ಟಿಯನ್ನು ಔಪಚಾರಿಕವಾಗಿ ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ ಮತ್ತು ಅನುಮೋದನೆಯ ನಂತರ ಅಧಿಕೃತ ಗೆಜೆಟ್ ಮೂಲಕ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.














