ಸುಳ್ಯ:ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಮಲೆನಾಡು ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನ.15ರಂದು ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲ ನೀಡಲಾಗುವುದು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಸಾಮಾನ್ಯ ಬಡವರ ಬದುಕಿಗೆ ಆತಂಕ ತರುವ
ವರದಿ ಅನುಷ್ಠಾನದ ಹಿನ್ನಲೆಯಲ್ಲಿ ಕೈಗೊಳ್ಳುವ ರಾಜಕೀಯ ರಹಿತ ಹೋರಾಟಕ್ಕೆ ಎಲ್ಲಾ ಬೆಂಬಲ ನೀಡಲಾಗುವುದು. ಬಡವರನ್ನು ಬೀದಿಗೆ ತಳ್ಳುವ ಯಾವುದೇ ವರದಿ ಅನುಷ್ಠಾನ ಬೇಡ. ವರದಿ ಅನುಷ್ಠಾನ ಮಾಡಬಾರದು ಎಂದು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು. ಈ ಹೋರಾಟಕ್ಕೆ ಕೃಷಿಕರು, ಪಕ್ಷದ ಕಾರ್ಯಕರ್ತರು ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ವೆಂಕಟ್ ವಳಲಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.