ಸುಳ್ಯ:ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಮಂಗಳೂರು ಇದರ ಅಧೀನದಲ್ಲಿರುವ ಸುಳ್ಯ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಯಿತು. ಗ್ರಂಥಾಲಯ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನವನ್ನು ಹಿರಿಯ ಜಾನಪದ ಕಲಾವಿದ, ಸಾಹಿತಿ ಎ.ಕೆ.ಅಜಿಲ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ
ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಗುರುಗಳಾದ ಸಂತೋಷ್ ಮುಂಡೊಕಜೆ ಅವರು ಯೋಗ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಯೋಗಾಭ್ಯಾಸದ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸುಳ್ಯ ಶಾಖಾ ಗ್ರಂಥಾಲಯದ ಅಧ್ಯಯನ ಕೇಂದ್ರವನ್ನು ಬಳಸಿಕೊಂಡು ವ್ಯಾಸಂಗ ಮಾಡಿ ಉದ್ಯೋಗ ಪಡೆದ ಪುನೀತ್ ಎನ್.ವಿ. ಸನ್ಮಾನಿಸಿ ಗೌರವಿಸಲಾಯಿತು. ಗ್ರಂಥಾಲಯದ

ಅತ್ಯುತ್ತಮ ಓದುಗ ಪುರಸ್ಕಾರವನ್ನು ಎಲ್ಐಸಿಯ ನಿವೃತ್ತ ಉದ್ಯೋಗಿ ಗಣಪಯ್ಯ ಅವರಿಗೆ ನೀಡಿ ಗೌರವಿಸಲಾಯಿತು. ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸುಶ್ಮಿತಾ ಜಿ. (ಪ್ರಥಮ), ಆಶಿಕಾ ಎಂ.ಕೆ. (ದ್ವಿತೀಯ), ಶಮಿತಾ (ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ಚಂದ್ರಶೇಖರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ವಿದ್ಯಾರ್ಥಿನಿಯರಾದ ರೋಹಿಣಿ, ಮೋಕ್ಷಿತಾ, ಆದ್ವಿಕಾ ಹಾಗೂ ಆರಾಧ್ಯ ನಾಡಗೀತೆ ಹಾಡಿದರು.
ಸುಳ್ಯ ಗ್ರಂಥಾಲಯದ ಗ್ರಂಥಪಾಲಕಿ ವಾರಿಜಾ ಎ. ನೀರಬಿದಿರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಾಲಯ ಸಿಬ್ಬಂದಿಗಳಾದ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ವಂದಿಸಿದರು. ಚಂದ್ರಶೇಖರ್ ಸಹಕರಿಸಿದರು.ಶಶಿಕಲಾ ನೀರಬಿದಿರೆ, ಯೋಗೇನ ಚಿತ್ತಸ್ಯ ಯೋಗಕೇಂದ್ರದ ಶಿಕ್ಷಕಿ ಪಶ್ವಿಜಾ ಸಂತೋಷ್ ಮತ್ತಿತರರು ಪ್ರಮುಖರು, ಗ್ರಂಥಾಲಯದ ಓದುಗರು, ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರು ಉಪಸ್ತಿತರಿದ್ದರು.













