ಪಂಜ:ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟ ಶ್ರೀ ಕಾಚುಕುಜುಂಬ ದೈವದ ಮೂಲ ಸ್ಥಾನ ಗರಡಿಬೈಲ್ನಲ್ಲಿ ನೂತನವಾಗಿ ನಿರ್ಮಾಣ ವಾಗುತಿರುವ ಶ್ರೀ ಕಾಚು ಕುಜುಂಬ ದೈವಸ್ಥಾನದ ಜೀರ್ಣೋಧಾರ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಪರಮೇಶ್ವರ ಗೌಡ ಬಿಳಿಮಲೆ, ಉಪಾಧ್ಯಕ್ಷರಾಗಿ ಉಮೇಶ್ ಬುಡೆಂಗಿ ಬಳ್ಪ ಹಾಗೂ
ಕಾರ್ಯದರ್ಶಿಯಾಗಿ ಅನಂದ ಗೌಡ ಜಳಕದಹೊಳೆ ಆಯ್ಕೆಯಾದರು. ಪಂಜ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿದ್ಧರು. ಸಭೆಯಲ್ಲಿ ವ್ಯವಸ್ಥಾಪನ ಸಮಿತಿ ಗೌರವ ಸಲಹೆ ಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ವ್ಯವಸ್ಥಾಪನ ಸಮಿತಿ

ಪರಮೇಶ್ವರ ಗೌಡ ಬಿಳಿಮಲೆ, ಉಮೇಶ್ ಬುಡೆಂಗಿ ಬಳ್ಪ,ಅನಂದ ಗೌಡ ಜಳಕದಹೊಳೆ
ಸದಸ್ಯರಾದ ರಾಮಚಂದ್ರ ಭಟ್, ಶ್ರೀ ಮಾಲಪ್ಪ ಗೌಡ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕಡ, ಸಂತೋಷ್ ಕುಮಾರ್ ರೈ ಪಲತ್ತಡ್ಕ, ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಲಿನಿ ಕುದ್ವ ಹಾಗೂ ಪವಿತ್ರ ಮಲ್ಲೆಟ್ಟಿ ಉಪಸ್ಥಿತರಿದ್ದರು. ನೂತನ ದೈವಸ್ಥಾನದ ನಿರ್ಮಾಣ ಕೆಲಸ ಈಗಾಗಲೇ ಪ್ರಾರಂಭ ಗೊಂಡಿದ್ದು ಪ್ರತಿಷ್ಟಾ ಕಾರ್ಯಕ್ರಮ 3-12-25 ರಿಂದ ಆರಂಭ ವಾಗಿ 5-12-25 ರಂದು ನಡೆಯಲಿದೆ ಎಂದು ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ.