ಸುಳ್ಯ:ರೋಟರಿ ಕ್ಲಬ್ ಸುಳ್ಯ ಸಿಟಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ.10 ರಂದು ರಥಬೀದಿಯ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಕ್ಲಬ್ನ ನಿಯೋಜಿತ ಅಧ್ಯಕ್ಷ ಹೇಮಂತ್ ಕಾಮತ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ರೋಟರಿ ಕ್ಲಬ್ನ ಅಧ್ಯಕ್ಷ ಡಾ. ರಾಮ ಮೋಹನ್ ಕೆ.ಎನ್. ಪದಗ್ರಹಣ ನೆರವೇರಿಸಲಿದ್ದಾರೆ. ನೂತನ
ಅಧ್ಯಕ್ಷ ಹೇಮಂತ್ ಕಾಮತ್, ಕಾರ್ಯದರ್ಶಿ ಸುಹಾಸ್ ಪಿ.ಜಿ. ಕೋಶಾಧಿಕಾರಿ ಪ್ರೀತಂ.ಡಿ.ಕೆ ನೇತೃತ್ವದ ತಂಡ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ಝೋನಲ್ ಲೆಫ್ಟಿನೆಂಟ್ ಪುರುಷೋತ್ತಮ ಕೆ.ಜಿ, ಗವರ್ನರ್ ವಿಶೇಷ ಪ್ರತಿನಿಧಿ.ಡಾ.ಕೇಶವ.ಪಿ. ಕೆ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ವರ್ಷ ರೋಟರಿ ಕ್ಲಬ್ ವತಿಯಿಂದ ಹಲವು ಯೋಜನೆಗಳನ್ನು ಆಯೋಜಿಸಲಾಗಿದೆ.ಸಂಧ್ಯಾ ಸುರಕ್ಷಾ, ಆರೋಗ್ಯ, ಪರಿಸರ ಸಂಬಂಧಿಸಿದ ಯೋಜನೆಗಳು, ಅಂಗನವಾಡಿ, ಶಾಲೆಗಳ ಅಭಿವೃದ್ಧಿಗೆ ನೆರವು, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ಶಿವಪ್ರಸಾದ್ ಕೆ.ವಿ, ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ನೂತನ ಕಾರ್ಯದರ್ಶಿ ಸುಹಾಸ್.ಪಿ.ಜಿ, ಕೋಶಾಧಿಕಾರಿ ಪ್ರೀತಂ ಡಿ.ಕೆ. ಮಾಜಿ ಅಧ್ಯಕ್ಷ ಗಿರೀಶ್ ನಾರ್ಕೋಡು ಉಪಸ್ಥಿತರಿದ್ದರು