ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಚಾಂಪಿಯನ್ಶಿಪ್ ‘ಸುಳ್ಯ ಕಬಡ್ಡಿ ಉತ್ಸವ’ದ ಆರಂಭಕ್ಕೆ

ಕ್ಷಣ ಗಣನೆ ಆರಂಭವಾಗಿದೆ. ಪಂದ್ಯಾಟದ ಟಿಕೆಟ್ ಕೌಂಟರ್ ಉದ್ಘಾಟನೆಗೊಂಡಿತು. 3 ಸಾವಿರಕ್ಕೂ ಅಧಿಕ ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ನಿರ್ಮಿಸಲಾಗಿದೆ. 200ರೂ ಮುಖಬೆಲೆಯ ಟಿಕೆಟ್ ಲಭ್ಯವಿದೆ. ರಾತ್ರಿ 8 ಗಂಟೆಯ ತನಕ ಟಿಕೆಟ್ ಲಭ್ಯವಿರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.









