ಪೆರಾಜೆ: 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೆರಾಜೆಯ ಜ್ಯೋತಿ ಪ್ರೌಢ ಶಾಲೆಗೆ ಶೇ.95 ಫಲಿತಾಂಶ ದಾಖಲಾಗಿದೆ. 20 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 19 ಮಂದಿ

ಉತ್ತೀರ್ಣರಾಗಿದ್ದಾರೆ. 5 ಡಿಸ್ಟಿಂಕ್ಷನ್, 9 ಪ್ರಥಮ ಶ್ರೇಣಿ, 5 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ವೃಷಾಂಕ್ ಕೆ.ಎನ್(580), ಕೌಶಿಕ್ ಎಂ.ಎಂ.(568), ಸಚಿನ್ ಕೆ.ವಿ(556), ತರುಣ್ ಪಿ.ಡಿ(553), ಶ್ರುತಿ ಪಿ.ಎಲ್(531) ಅಂಕ ಪಡೆದರು.







