ಸುಳ್ಯ: ತೋಟಗಾರಿಕಾ ಬೆಳೆಗಳು ರೋಗಗಳಿಗೆ ತುತ್ತಾಗುತ್ತಿದೆ. ರೈತರು ಕೇವಲ ಒಂದು ಬೆಳೆಯನ್ನು ನಂಬಿಕೊಳ್ಳದೇ ಉಪಕೃಷಿಯತ್ತ ಗಮನ ಹರಿಸಬೇಕಾಗಿದೆ. ಜೇನು ಕೃಷಿ ರೈತರಿಗೆ ಪೂರಕವಾದ ಉಪ ಬೆಳೆಯ ಮೂಲಕ ಆದಾಯದ ಮೂಲವಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ತೋಟಗಾರಿಕಾ ಇಲಾಖೆ ವತಿಯಿಂದ ಸುಳ್ಯ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಲಯನ್ಸ್ ಸೇವಾ ಸದನದಲ್ಲಿ ಬುಧವಾರ ನಡೆದ ೨೦೨೨-೨೩ ರ ಜಿ.ಪಂ. ಯೋಜನೆಯಡಿ ಜೇನುಕೃಷಿ ಬಗ್ಗೆ ರೈತರಿಗೆ
ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ಕೃಷಿಯನ್ನು ಪ್ರೀತಿಸಬೇಕು. ಜೇನು ಕೃಷಿಯ ಜೊತೆಗೆ ರೈತರು ಅವಲಂಬಿತರಾಗುವ ಮೂಲಕ ಕೃಷಿ ಕುಟುಂಬಗಳು ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ. ರೈತರು ಪರಿಸರದ ಜೊತೆಗೆ ಜೀವನ ನಡೆಸಬೇಕು, ಆವಾಗ ಕೃಷಿಕರ ಜೀವನ ಕೂಡ ಯಶಸ್ಸು ಕಾಣುತ್ತದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಉಪಸ್ಥಿತರಿದ್ದರು ಸಂಪನ್ಮೂಲ ವ್ಯಕ್ತಿಯಾಗಿ ಜೇನು ಕೃಷಿಕ ಕೀರ್ತನ್ ಶೇಣಿ ರೈತರಿಗೆ ಮಾಹಿತಿ ನೀಡಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಕ್ಲಬ್ ಖಜಾಂಜಿ ಕಿರಣ್ ನೀರ್ಪಾಡಿ ವಂದಿಸಿದರು. ತೋಟಗಾರಿಕಾ ಇಲಾಖೆಯ ಧರ್ಮಪಾಲ ಕಾರ್ಯಕ್ರಮ ನಿರೂಪಿಸಿದರು.