ಸುಳ್ಯ:ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಿಕ್ಷಕ ದಿನಾಚರಣೆ ಪ್ರಯುಕ್ತ ಸಾಹಿತಿಗಳಾದ ಇಬ್ಬರು ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ನಿವೃತ್ತ ಶಿಕ್ಷಕ ಎಂ.ಟಿ ಶಾಂತಿಮೂಲೆ, ಸಾಹಿತಿ ಪ್ರಭಾಕರ ಶಿಶಿಲ ಅವರನ್ನು

ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ,ಕೋಶಾಧಿಕಾರಿ ದಯಾನಂದ ಆಳ್ವ,ಸದಸ್ಯರಾದ ಸಂಜೀವ ಕುದ್ಪಾಜೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಚರಿಷ್ಮಾ ಕಡಪಳ ಮತ್ತು ಯಾದವೇಂದ್ರ ಕಡಪಳ ಸಂಕೀರ್ಣ ಚೊಕ್ಕಾಡಿ ರೂಪವಾಣಿ ಮತ್ತಿತರರು ಇದ್ದರು.










