ದುಬೈ: ಶ್ರೀಚರಣಿ (7ಕ್ಕೆ 3) ಹಾಗೂ ಪ್ರೇಮಾ ರಾವತ್ (9ಕ್ಕೆ 3) ಸಹಿತ ಬೌಲರ್ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮಹಿಳೆಯರ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 7 ವಿಕೆಟ್ಗಳ ಗೆಲುವು ದಾಖಲಿಸಿತು.ಸತತ 10ನೇ ಆವೃತ್ತಿಯಲ್ಲೂ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡ ಎ ಗುಂಪಿನ
ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಹರ್ಮಾನ್ಪ್ರೀತ್ ಕೌರ್ ಪಡೆ ಗುರುವಾರ (ಸೆ.10) ಮೊದಲ ಸೆಮೀಸ್ನಲ್ಲಿ ಬಿ ಗುಂಪಿನ ಎರಡನೇ ಸ್ಥಾನಿ ಎದುರು ಸೆಮಿಫೈನಲ್ಲಿ ಸೆಣಸಲಿದೆ. ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್ಗಳ ದಾಳಿಗೆ ತತ್ತರಿಸಿದ ಪಾಕ್ 9 ರನ್ ಅಂತರದಲ್ಲಿ ಆರು ವಿಕೆಟ್ ಕೈಚೆಲ್ಲಿತು.18.1 ಓವರ್ಗಳಲ್ಲಿ 55 ರನ್ಗಳಿಗೆ ಆಲೌಟ್ ಆಯಿತು.ಪ್ರತಿಯಾಗಿ
ಚೇಸಿಂಗ್ನಲ್ಲಿ ಫಾತಿಮಾ ಸನಾ (17ಕ್ಕೆ 3) ತಿರುಗೇಟು ನೀಡಿದರೂ ಭಾರತ ಅಂತಿಮವಾಗಿ 8.4 ಓವರ್ಗಳಲ್ಲಿ 3 ವಿಕೆಟ್ಗೆ 57 ರನ್ಗಳಿಸಿ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ಸು ಕಂಡಿತು.
ಸ್ಕೋರ್:ಪಾಕಿಸ್ತಾನ: 18.1 ಓವರ್ಗಳಲ್ಲಿ 55 (ಮುನೀಬಾ 13, ಶಾವಯಿ 14, ಆಯೇಷಾ 2, ಫಾತಿಮಾ 5, ಉಮ್ ಇ ಹನಿ 6, ತುಬ 9, ಶ್ರೀಚರಣಿ 7ಕ್ಕೆ 3, ಪ್ರೇಮಾ ರಾವತ್ 9ಕ್ಕೆ 3, ದೀಪ್ತಿ ಶರ್ಮ 5ಕ್ಕೆ 2, ಶೆಾಲಿ 10ಕ್ಕೆ 1).
ಭಾರತ: 8.4 ಓವರ್ಗಳಲ್ಲಿ 3 ವಿಕೆಟ್ಗೆ 57 (ಸ್ಮತಿ ಮಂದನಾ 9, ಶೆಾಲಿ 12, ಪ್ರತೀಕಾ 4, ಹರ್ಮಾನ್ಪ್ರೀತ್ 18, ದೀಪ್ತಿ 12, ಫಾತಿಮಾ 17ಕ್ಕೆ 3).










