ಸುಳ್ಯ:ಸುಳ್ಯ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರು ಹಲವು ಬೇಡಿಕೆಗಳ ಮನವಿ ಸಲ್ಲಿಸಿದರು.ಸರ್ಕಾರಿ ಭೂಮಿಗೆ ರಸ್ತೆ ದೃಡೀಕರಣ, ನಗರದ ಪಾರ್ಕಿಂಗ್ ಸಮಸ್ಯೆ, ಅಮೃತ್ 2.0 ಯೋಜನೆಯ ರಸ್ತೆ ದುರಸ್ತಿ, ಕೊಲ್ಲಮೊಗರು ಸ್ಮಶಾನ ಮಂಜೂರಾತಿ, ನಗರದ ಸಿ. ಸಿ ಟಿವಿ ಬಳಿ ಹೈ ಬೀಮ್ ದೀಪ ಅಳವಡಿಕೆ, 94 ಸಿ, 94ಸಿಸಿ ತಿರಸ್ಕೃತ ಅರ್ಜಿಗಳ ಪುನರ್ ಪರಿಶೀಲನೆ ಮೊದಲಾದ ಸಮಸ್ಯೆಗಳ
ಪರಿಹಾರಕ್ಕೆ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ಮನವಿ ಸಲ್ಲಿಸಿದರು.ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕನ್ವರ್ಷನ್ ಮತ್ತು 9/11 ನೀಡುವ ಸಂದರ್ಭದಲ್ಲಿ ಸರ್ಕಾರಿ ಭೂಮಿಯಲ್ಲಿ ಹೋಗುವ ರಸ್ತೆಗಳಿಗೆ ಕಂದಾಯ ಇಲಾಖೆ ಯಿಂದ ರಸ್ತೆ ದೃಡೀಕರಣ ಪತ್ರವನ್ನು ನೀಡಬೇಕು, ನಗರದ ಪಾರ್ಕಿಂಗ್ ವ್ಯವಸ್ಥೆ ಯ ಬಗ್ಗೆ ಸಭೆ ನಡೆಸಿ ವ್ಯವಸ್ಥಿತ ವಾಗಿಸಬೇಕು ಮೊದಲಾದ ವಿಷಯಗಳ ಬಗ್ಗೆ ಅರ್ಜಿ ಸಲ್ಲಿಸಲಾಯಿತು. ಕಾಮಗಾರಿ ಸ್ಥಗಿತಗೊಂಡ

ಅಜ್ಜಾವರ ಗ್ರಾಮದ ತೋರಣಗುಂಡಿ-ಮುಳ್ಯ ರಸ್ತೆ ಅಭಿವೃದ್ಧಿ ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ದೇವಿಪ್ರಸಾದ್ ಅತ್ಯಾಡಿ ಮನವಿ ಸಲ್ಲಿಸಿದರು. ಕಾಂಕ್ರೀಟ್ ಮಾಡಲೆಂದು ಡಾಮರು ಅಗೆಯಲಾಗಿದ್ದು ಇದೀಗ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ, ನೆಟ್ವರ್ಕ್ ಸಮಸ್ಯೆಯ ಬಗ್ಗೆ ಅವರು ಗಮನ ಸೆಳೆದರು.
ಸುಳ್ಯ ನಗರ ವ್ಯಾಪ್ತಿಯ ರಸ್ತೆ ಸಮಸ್ಯೆಗಳ ಬಗ್ಗೆ ಆನಂದ ಬೆಟ್ಟಂಪಾಡಿ ನೇತೃತ್ವದಲ್ಲಿ ಸಾರ್ವಜನಿಕರು ಮನವಿ ಸಲ್ಲಿಸಲಾಯಿತು. ಗುಂಡ್ಯಡ್ಕ-ಬೆಟ್ಟಂಪಾಡಿ ರಸ್ತೆ, ಲೇಔಟ್ ರಸ್ತೆ, ಆಶ್ರಯ ಕಾಲೊನಿ ರಸ್ತೆಗಳ ಅಭಿವೃದ್ಧಿಗೆ ಮನವಿ ಸಲ್ಲಿಸಲಾಯಿತು.










