ಕಡಬ: ದ. ಕ ಜಿಲ್ಲೆಯ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲಿ ಬಹಳಷ್ಟು ವರ್ಷಗಳಿಂದ ಜಟಿಲ ವಾಗಿ ಉಳಿದಿರುವ ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ನಡುವಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಸರ್ವೆ ತಂಡವನ್ನು ರಚಿಸಿ ಸಮರೋಪಾದಿಯಲ್ಲಿ ಜಂಟಿ ಸರ್ವೆ ನಡೆಸಿ ಪರಿಹಾರ ನೀಡಲಾಗುವುದು.ಜನತಾದರ್ಶನದ ಮೂಲಕ ಸಲ್ಲಿಕೆಯಾದ ಅಹವಾಲುಗಳನ್ನು ಫಲಪ್ರದವಾಗಲು ಅಧಿಕಾರಿಗಳು
ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ರಾಜ್ಯ ಅರೋಗ್ಯ ಸಚಿವ , ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಹೇಳಿದರು. ಅವರು ಕಡಬದ ಸೈಂಟ್ ಜೋಕಿಮ್ಸ್ ಸಭಾಂಗಣದಲ್ಲಿ ಶನಿವಾರ ನಡದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನ ಪ್ರತಿನಿಧಿಗಳು , ಅಧಿಕಾರಿಗಳು ಸಾರ್ವಜನಿಕ ಸೇವೆಗಿರುವುದು ಎಂಬ ಮಾನಸಿಕತೆ ಬೆಳಸಿಕೊಂಡು ಜನ ಸಾಮನ್ಯರೊಡನೆ ಗೌರವವಾಗಿ ನಡೆದುಕೊಳ್ಳಬೇಕು. ಸರ್ಕಾರಿ ಸೇವೆಯಲ್ಲಿ ಮಾನವೀಯತೆ ಇದ್ದಾಗ ಜನರ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತದೆ. ತಳಮಟ್ಟದಲ್ಲಿರುವ ಅಧಿಕಾರಿಗಳು ಜನರ ಸಮಸ್ಯೆಗೆ ಜವಬ್ದಾರಿಯ ತಿರ್ಮಾನ ಕೈಗೊಂಡಾಗ ಜನರ ಸಮಸ್ಯೆ ತಾರ್ಕಿಕ ಅಂತ್ಯ ಕಂಡು ಮೇಲಾಧಿಕಾರಿ, ಜನಪ್ರತಿದಿಗಳ ಹೊರೆ ಕಡಿಮೆಯಾಗುತ್ತದೆ. ಜನರು ಎಲ್ಲಾ ಸಮಸ್ಯೆಗಳು ಅಧಿಕಾಗಳಿಂದ ಪರಿಹಾರ ನೀಡಲು ಸಾದ್ಯವಿಲ್ಲ . ಅಂತಹ ಸಮಸ್ಯೆಗಳನ್ನು ಸರ್ಕಾರಕ್ಕೆ ಬರೆದುಕೊಂಡಾಗ ಆಡಳಿತ ವ್ಯವಸ್ಥೆಯಲ್ಲಿ ಕಾನೂನು ಬದಲಾಯಿಸಿಕೊಂಡು ರ್ಯಾಯ ಕಾನೂನು ರಚಿಸಿ ಸಮಸ್ಯೆಯನ್ನು ಪರಿಹರಿಸಬಹುದು. ಜನರ ಹಿತ ಕಾಯುವುದು ಸರ್ಕಾರದ ದೈಯವಾಗಿದೆ. ಈ ನಿಟ್ಟನಲ್ಲಿ ಚುನಾವಣಾ ಪೂರ್ವದಲ್ಲಿ ಸರ್ಕಾರ ಜನರಿಗೆ ನೀಡಿದ ಅಸ್ವಾಸನೆಯನ್ನು ಚಾಚು ತಪ್ಪದೆ ಅನುಷ್ಠಾನ ಮಾಡಿದೆ ಎಂದರು.
ದ.ಕ ಜಿಲ್ಲಾ ಪಂಚಾಯತ್ ಸಿ ಇ ಓ ಡಾ.ಆನಂದ, ಪುತ್ತೂರು ಉಪವಿಭಾಗದ ಪ್ರಭಾರ ಡಿ ವೈ ಎಸ್ ಪಿ ವಿಜಯ ಪ್ರಸಾದ್ , ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಜಿ, ಜಿಲ್ಲಾ ಅರಣ್ಯ ಉಪಸಂರಕ್ಷಾಣಾಧಿಕಾರಿ ಅಂತೋಣಿ ಮರಿಯಪ್ಪ, ಮಂಗಳೂರು ಕಾರ್ಪರೇಟರ್ ವಿನಯರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲೂಕು ಅಧ್ಯಕ್ಷ ಸುದೀರ್ ಶೆಟ್ಟಿ, ಪುತ್ತೂರು ವಿಭಾಗ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಅಧಿಕಾರಿಗಳಾದ ಶ್ರವಣ್, ಅಕ್ಷಯ್ , ಜಿಲ್ಲಾ ಅರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಕಡಬ ತಹಶೀಲ್ದಾರ್ ಪ್ರಬಾಕರ ಖಜೂರೆ , ಕಡಬ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಕೆಂಪೇಗೌಡ ಮೊದಲಾದವರು ಇದ್ದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.
ಸಬಾಂಗಣದ ಹೊರಗಡೆ ವಿವಿಧ ಇಲಾಖೆಗಳ ಕೌಂಟರ್ ತೆರಯಲಾಗಿತ್ತು. ಆಯಾ ಇಲಾಖೆಗಳ ಕೌಂಟರ್ನಲ್ಲಿ ದೂರು ಸ್ವೀಕರಿಸಿ ಟೋಕನ್ ನಂಬ್ರ ನೀಡಲಾಗುತ್ತಿತ್ತು. ಬಳಿಕ ಸಭಾಂಗಣದಲ್ಲಿ ಟೋಕನ್ ನಂಬ್ರ ಪ್ರಕಾರವಾಗಿ ಸಚಿವರ ಎದುರು ಕೂತು ಅಹವಾಲು ಬಗ್ಗೆ ವಿವರಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಬಂದಪಟ್ಟ ಅಧಿಕಾರಿಗಳನ್ನು ಬಳಿಗೆ ಕರೆದು ಸಮಸ್ಯೆ ಪರಿಹರಿಸುವಂತೆ ಸಚಿವರು ಸೂಚಿಸುತ್ತಿದ್ದರು. ಅಂಗವಿಕಲರ ಅಹವಾಲನ್ನು ಸಚಿವರ ವೇದಿಕೆಯಿಂದ ಕೆಳಗಿಳಿದು ಬಂದು ಸ್ವೀಕರಿಸಿ ಪರಿಹಾರ ಸೂಚಿಸಿದರು.