ಸುಳ್ಯ:ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’
ಇದರ ಆಡಳಿತಕ್ಕೊಳಪಟ್ಟ ಕೆವಿಜಿ ಐಟಿಐಯ ನೂತನ ಪ್ರಾಂಶುಪಾಲರಾಗಿ ದಿನೇಶ್ ಮಡ್ತಿಲ ಜು.2 ರಂದು ಅಧಿಕಾರ ಸ್ವೀಕರಿಸಿದರು. ಉಪಪ್ರಾಂಶುಪಾಲರಾಗಿ ಗುಣರತ್ನ ಅಧಿಕಾರ ಸ್ವೀಕರಿಸಿದರು. ಎ.ಓ.ಎಲ್.ಇ ಕಮಿಟಿ ‘ಬಿ’ ಇದರ ಅಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ದಿನೇಶ್ ಮಡ್ತಿಲ ಮತ್ತು ಗುಣರತ್ನರವರಿಗೆ ಆದೇಶ ಪತ್ರವನ್ನು ಹಸ್ತಾಂತರಿಸಿದರು.ಕಾರ್ಯದರ್ಶಿ ಜ್ಯೋತಿ ಆರ್.ಪ್ರಸಾದ್ ರವರು ಶುಭಹಾರೈಸಿದರು. ಈ ಸಂದರ್ಭದಲ್ಲಿ
ಕೆ.ವಿ.ಜಿ.ಡೆಂಟಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಮೌರ್ಯ ಆರ್ ಕುರುಂಜಿ,ಗವರ್ನಿಂಗ್ ಕೌನ್ಸಿಲ್ ಸದಸ್ಯರುಗಳಾದ ದೀಪಕ್ ಕುತ್ತಮೊಟ್ಟೆ, ದಯಾನಂದ ಕುರುಂಜಿ ಹಾಗೂ ಪ್ರಸನ್ನ ಕಲ್ಲಾಜೆ,ನಿವೃತ್ತ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ,ನಿವೃತ್ತ ಕಚೇರಿ ಅಧೀಕ್ಷಕ ಭವಾನಿಶಂಕರ ಅಡ್ತಲೆ,ಹಿರಿಯ ಎಜೆಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋಧ ರಾಮಚಂದ್ರ,ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್,ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಅಣ್ಣಯ್ಯ, ಕೆವಿಜಿ ಐಪಿಎಸ್ ಪ್ರಾಂಶುಪಾಲರಾದ ಅರುಣ್ ಕುಮಾರ್,ಭಾಗಮಂಡಲ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಕೆ,ವಿ, ಉಪಪ್ರಾಂಶುಪಾಲರುಗಳಾದ ಶ್ರೀಧರ್,ಹರೀಶ್ ಕೆ,ದೀಪಕ್,ಶಿಲ್ಪಾ ಬಿದ್ದಪ್ಪ, ಹಾಗೂ ಕಾಲೇಜು ಆಡಳಿತಾಧಿಕಾರಿಗಳಾದ ಬಿ.ಟಿ.ಮಾಧವ,ನಾಗೇಶ್ ಕೊಚ್ಚಿ, ಕಚೇರಿ ಮುಖ್ಯಸ್ಥರುಗಳಾದ ಧನಂಜಯ ಕಲ್ಲುಗದ್ದೆ,ಪದ್ಮನಾಭ ಕೆ,ಯತೀಶ್,ವಸಂತ ಕಿರಿಭಾಗ ಹಾಗೂ ಐಟಿಐನ ಉಪನ್ಯಾಸಕ ವರ್ಗದವರು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.