ಅರಂತೋಡು:ಶಿಕ್ಷಣ ಸಂಸ್ಥೆಗಳಿಗೆ ನೀಡುವ ಕೊಡುಗೆ ಯಾವತ್ತೂ ವ್ಯರ್ಥವಾಗುವುದಿಲ್ಲ. ಶಿಕ್ಷಣ ಸಂಸ್ಥೆಗಳು ಉತ್ತಮ ವ್ಯಕ್ತಿತ್ವದ ನಿರ್ಮಾಣಕ್ಕೆ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಸಂಸ್ಥೆಗಳು ಸಹಕಾರಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಅರಂತೋಡು ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿ ಆಡಳಿತದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಊರ ಪರವೂರ ವಿದ್ಯಾಭಿಮಾನಿಗಳ ಉದಾರ ಕೊಡುಗೆ ಹಾಗೂ ಎಂ. ಎಸ್. ಸುಬ್ರಹ್ಮಣ್ಯ ಮದುವೆಗದ್ದೆಯವರ ಪ್ರಧಾನ ಕೊಡುಗೆಯೊಂದಿಗೆ ನಿರ್ಮಾಣಗೊಂಡ ಐಶ್ವರ್ಯ ಮದುವೆಗದ್ದೆ ಸಭಾಭವನದ ಉದ್ಘಾಟನಾ ಸಮಾರಂಭವಮನ್ನು
ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಆಸ್ತಿ ಎಂದರು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿ ಆಡಳಿತದ ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಹಾಗೂ ಹೈಸ್ಕೂಲ್ ಸಮಾಜಕಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮಾನವ ಸಂಪನ್ಮೂಲ ಅಧಿಕಾರಿ ಭವಾನಿಶಂಕರ ಪಿಂಡಿಮನೆ ದಾನಿಗಳ ನಾಮಫಲಕ ಅನಾವರಣ ಮಾಡುವರು. ಮುಖ್ಯ ಅತಿಥಿಗಳಾಗಿ
ಬೆಂಗಳೂರಿನ ನಾಮ್ಧಾರಿ ಸೀಡ್ಸ್ನ ಹಿರಿಯ ಉಪಾಧ್ಯಕ್ಷ ಎಂ.ಎಸ್. ಸುಬ್ರಹ್ಮಣ್ಯ ಮದುವೆಗದ್ದೆ, ಹಿರಿಯ ತಜ್ಞ ವೈದ್ಯರಾದ ಡಾ.ತಾಜುದ್ದೀನ್, ಬೆಂಗಳೂರಿನ ಹಿರಿಯ ಸಾಪ್ಟ್ವೇರ್ ತಜ್ಞ ಕೆ. ಆರ್. ಆನಂದ ಕಲ್ಲುಗದ್ದೆ, ಶಿವಮೊಗ್ಗದ ಉದ್ಯಮಿ ಸತೀಶ್ ದೋಳ, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು
ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ತೇಜಾವತಿ ಮಣೀಶ್ ಉಳುವಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಬಿ. ದಯಾನಂದ ಕುರುಂಜಿ ಭಾಗವಹಿಸಿದ್ದರು.ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಕಾರ್ಯದರ್ಶಿ ಕೆ.ಆರ್.ಪದ್ಮನಾಭ, ಕೋಶಾಧಿಕಾರಿ ಕೆ.ಎ.ಸಂಶುದ್ದೀನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುರೇಶ್ ವಾಗ್ಲೆ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಸೋಮಶೇಖರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಅಧ್ಯಕ್ಷ ಪಿ. ಬಿ. ದಿವಾಕರ ರೈ ಸ್ವಾಗತಿಸಿದರು.ಪಾಪ್ಯುಲರ್ ಎಜ್ಯುಕೇಶನ್ ಸೊಸ್ಯಾಟಿಯ ಸಂಚಾಲಕರಾದ ಕೆ.ಆರ್.ಗಂಗಾಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು.