ಚೆನ್ನೈ:ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾಯಕ ಇಶಾನ್ ಕಿಶನ್ ಅವರ ಸ್ಪೋಟಕ ದ್ವಿಶತಕದ ನೆರವಿನಿಂದ ಪೂರ್ವ ವಲಯ ತಂಡವು ಎರಡನೇ ದಿನದ ಅಂತ್ಯಕ್ಕೆ 163 ಓವರ್ಗಳಲ್ಲಿ 708 ರನ್ಗೆ ಆಲೌಟ್ ಆಗಿದೆ.ಮೊದಲ ದಿನದ ಅಂತ್ಯಕ್ಕೆ 79 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿದ್ದ ಪೂರ್ವ ವಲಯ, ಎರಡನೇ ದಿನವೂ
ಉತ್ತಮ ಬ್ಯಾಟಿಂಗ್ ಮಾಡಿತು.111 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ನಾಯಕ ಇಶಾನ್ ಕಿಶನ್, ಎರಡನೇ ದಿನವೂ ಸ್ಪೋಟಕ ಬ್ಯಾಟಿಂಗ್ ಮಾಡಿದರು. 250 ರನ್ ಗಳಿಸಿದ್ದ ವೇಳೆ ರಿಟೈರ್ಡ್ ಹರ್ಟ್ ಆಗಿ ಮೈದಾನ ತೊರೆದಿದ್ದ ಇಶಾನ್, ನಂತರ ಬ್ಯಾಟಿಂಗ್ ಮುಂದುವರಿಸಿದರು. 334 ಎಸೆತಗಳಲ್ಲಿ 30 ಬೌಂಡರಿ, 7 ಸಿಕ್ಸರ್ ಸಹಿತ 270 ರನ್ ಗಳಿಸಿದರು.
ಮೊದಲ ದಿನದ ಅಂತ್ಯಕ್ಕೆ ಕಿಶನ್ ಜೊತೆ ಕ್ರೀಸ್ ಕಾಯ್ದುಕೊಂಡಿದ್ದ ಕುಮಾರ್ ಕುಶಾಗ್ರ ಅವರು ಎರಡನೇ ದಿನ ಶತಕ ಸಿಡಿಸಿದರು. 101 ರನ್ ಗಳಿಸಿ, ಟಿ.ವಿಜಯ್ಗೆ ವಿಕೆಟ್ ಒಪ್ಪಿಸಿದರು. ಇವರಿಬ್ಬರು 5ನೇ ವಿಕೆಟ್ಗೆ
287 ಎಸೆತಗಳಲ್ಲಿ 230 ರನ್ ಗಳಿಸಿದರು.ಅಂಕುಲ್ ರಾಯ್(45 ರನ್), ಮೊಹಮ್ಮದ್ ಕೌನೈನ್ ಖುರೈಶಿ(40 ರನ್), ಮೊಹಮ್ಮದ್ ಶಮಿ(28 ರನ್) ತಂಡದ ಮೊತ್ತವನ್ನು 700 ರನ್ ಗಡಿದಾಟಿಸುವಲ್ಲಿ ನೆರವಾದರು.ದಕ್ಷಿಣ ವಲಯ ಪರ ಟಿ.ವಿಜಯ್ 4 ವಿಕೆಟ್, ಶ್ರೇಯಸ್ ಗೋಪಾಲ್ ಮತ್ತು ಚಾಮ ವಿ. ಮಿಲಿಂದ್ 2 ವಿಕೆಟ್ ಕಬಳಿಸಿದರು.









