ನವದೆಹಲಿ:ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ವಿಂಡೀಸ್ ತಂಡವನ್ನು ಎದುರಿಸುತಿದೆ. ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುತಿದೆ. ಅಹಮದಾಬಾದಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ ಮತ್ತು 140 ರನ್ಗಳಿಂದ ಗೆದ್ದಿತ್ತು. ಎರಡು ಪಂದ್ಯಗಳ
ಸರಣಿಯಲ್ಲಿ 1–0 ಮುನ್ನಡೆ ಗಳಿಸಿತ್ತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಲಯಕ್ಕೆ ಮರಳಬೇಕಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಎರಡು ಶತಕ ಮತ್ತು ಎರಡು ಅರ್ಧಶತಕ ದಾಖಲಿಸಿದ್ದರು. ಒಟ್ಟು 411 ರನ್ಗಳನ್ನು ಪೇರಿಸಿದ್ದರು. ಸಾಯ್ ಸುದರ್ಶನ್,ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರಿಗೂ ಉತ್ತಮ ಅವಕಾಶಗಳು ಸಿಗುತ್ತಿವೆ. ನಾಯಕ ಶುಭಮನ್ ಗಿಲ್ ಕೂಡ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳುವ ಭರವಸೆ ಮೂಡಿಸಿದ್ದಾರೆ. ಮೊದಲ ಟೆಸ್ಟ್ನಲ್ಲಿ ಅವರು ಕೆ.ಎಲ್. ರಾಹುಲ್ ಜೊತೆಗೆ ಚೆಂದದ ಜೊತೆಯಾಟವಾಡಿದ್ದರು.
ಭಾರತ ತಂಡವು ಯಾವುದೇ ಬದಲಾವಣೆ ಇಲ್ಲದೇ ತಂಡವನ್ನು ಕಣಕ್ಕಿಳಿಸಿದೆ.















