ನ್ಯೂಯಾರ್ಕ್: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎ ಗುಂಪಿನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಆಡುತಿರುವ ಭಾರತಕ್ಕೆ ಗೆಲುವಿಗೆ 97 ರನ್ ಗುರಿ.ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಭಾರತದ
ಬಿಗು ಬೌಲಿಂಗ್ ದಾಳಿಗೆ ಕುಸಿಯಿತು. ಐರ್ಲೆಂಡ್ 16 ಓವರ್ಗಳಲ್ಲಿ 96 ರನ್ಗೆ ಆಲ್ ಔಟ್ ಆಯಿತು. ಭಾರತದ ಬಿಗು ದಾಳಿಗೆ ಕುಸಿದ ಐರ್ಲೆಂಡ್ ಬ್ಯಾಟರ್ಗಳು ಪೆವಿಲಿಯನ್ಗೆ ಫೆರೇಡ್ ನಡೆಸಿದರು. ಭಾರತದ ಕರಾರುವಕ್ಕಾದ ಬೌಲಿಂಗ್ ಮುಂದೆ ಐರಿಷ್ ಬ್ಯಾಟರ್ಗಳು ನಿರುತ್ತರರಾದರು. ಕೊನೆಯ ಹಂತದಲ್ಲಿ 14 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹೀತ 26 ರನ್ ಗಳಿಸಿದ ಡೆಲಾನಿ ಐರ್ಲೆಂಡ್ನ ಟಾಪ್ ಸ್ಕೋರರ್ ಆದರು.
ಭಾರತದ ಪರ ಹಾರ್ದಿಕ್ ಪಾಂಡ್ಯ 3, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್, ಮಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ತಲಾ 1 ವಿಕೆಟ್ ಕಿತ್ತರು.