ಬೆಲ್ಫಾಸ್ಟ್: ಕ್ರಿಕೆಟ್ ಜಗತ್ತಿನ ಶಿಶು ಐರ್ಲೆಂಡ್ ತಂಡದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿಯೂ ವಿಶ್ವಕಪ್ ಚಾಂಪಿಯನ್ ಭಾರತಕ್ಕೆ ಸೋಲು.ಎರಡನೇ ಹಾಗೂ ಅಂತಿಮ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐರ್ಲೆಂಡ್ ಒಂದು ರನ್ಗಳ ರೋಚಕ ಗೆಲುವು ಸಾಧಿಸಿ ಸರಣಿಯನ್ನು 2-0 ಅಂತರದಲ್ಲಿ ಗೆದ್ದಿದೆ.ಮೊದಲು ಬ್ಯಾಟಿಂಗ್ ನಡೆಸಿದ
ಐರ್ಲೆಂಡ್ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 154 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಭಾರತ 20 ಓವರ್ಗಳಲ್ಲಿ 8ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭಾರತದ ಆರಂಭಿಕರಾದ ಸಂಜು ಸಾಮ್ಸನ್ ಹಾಗು ಅಭಿಷೇಕ್ ಶರ್ಮ ಇಬ್ಬರು ಸೊನ್ನೆ ಸುತ್ತಿದರು.ಇಶಾನ್ ಕಿಶನ್(12), ನಾಯಕ ಶ್ರೇಯಸ್ ಅಯ್ಯರ್ (10), ಅಕ್ಸರ್ ಪಟೇಲ್(14), ಶಿವಂ ದುಬೆ(20), ಸೂರ್ಯಾಂಶ್ ಶೆಡ್ಜೆ(1) ನಿರಾಶೆ ಮೂಡಿಸಿದರು. ಅರ್ಧ ಶತಕ ಸಿಡಿಸಿದ ತಿಲಕ್ ವರ್ಮ(55) ಹಾಗು ಕೊನೆಯಲ್ಲಿ ಹರ್ಷಿತ್ ರಾಣ 10 ಎಸೆತಗಳಲ್ಲಿ 21ರನ್ ಗಳಿಸಿ ಹೋರಾಟ ನಡೆಸಿದರೂ ಗೆಲುವಿನ ದಡ ಸೇರಿಸಲಾಗಲಿಲ್ಲ.
ಐರ್ಲೆಂಡ್ ಪರ ಹ್ಯಾರಿ ಟೆಕ್ಟರ್ ಅರ್ಧಶತಕ ಗಳಿಸಿದರು. 47 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹೀತ 53 ರನ್ ಬಾರಿಸಿದರು.ಬೆಂಜಮಿನ್ ಕಾಲಿಟ್ಜ್ 37 ರನ್ಗಳ ಕಾಣಿಕೆ ನೀಡಿದ್ದರು.ಭಾರತದ ಪರ ಪ್ರಿನ್ಸ್ ಯಾದವ್ 22 ರನ್ನಿಗೆ ಮೂರು ಕಬಳಿಸಿದರು. ಅರ್ಷದೀಪ್ ಸಿಂಗ್ ಹಾಗೂ ಶಿವಂ ದುಬೆ ತಲಾ ಎರಡು ವಿಕೆಟ್ ಗಳಿಸಿದರು.






