ಸುಳ್ಯ:ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ವತಿಯಿಂದ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಲಾಯಿತು.10ನೇ ತರಗತಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ನಾಲ್ಕೂರು ಗ್ರಾಮ ಅಂಜೇರಿ ಸುಬ್ಬ ಪಾಟಾಳಿ ಹಾಗೂ ವೇದಾವತಿ ದಂಪತಿಗಳ ಪುತ್ರಿ ಸುಶ್ಮಿತಾ ಹಾಗು

ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ 11ನೇ ಸ್ಥಾನ ಪಡೆದ ಕನಕಮಜಲು ಗ್ರಾಮದ ಗಣೇಶ ಕೊಲ್ಲಮೊಗ್ರ ಹಾಗೂ ಮಮತಾ ದಂಪತಿಗಳ ಪುತ್ರಿ ಶರಣ್ಯಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕರ್ಲಪ್ಪಾಡಿ, ಕಾರ್ಯದರ್ಶಿ ಗೋಪಾಲಕೃಷ್ಣ ಮೊರಂಗಲ್ಲು, ಕೋಶಾಧಿಕಾರಿ ರಾಧಾಕೃಷ್ಣ ಬೇರ್ಪಡ್ಕ, ಪದಾಧಿಕಾರಿಗಳಾದ ಮಹಾಲಿಂಗನ್ ಬಾಜರ್ತೊಟ್ಟಿ ಹೇಮಲತಾ ಕಲ್ಲುಗುಂಡಿ, ಉದಯರವಿ ಕಲ್ಚಾರು ಕೇಶವ ಮೊರಂಗಲ್ಲು, ಪ್ರವೀಣ್ ಕುಮಾರ್ ಜಯನಗರ, ಸತ್ಯಾ ಕೊಲ್ಲಮೊಗ್ರ ಮತ್ತಿತರರು ಉಪಸ್ಥಿತರಿದ್ದರು.








