ಗೂನಡ್ಕ: ಹಿಮಾಯತುಲ್ ಇಸ್ಲಾಂ ಜಮಾಅತ್ ಸಮಿತಿ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದರ ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಗೂನಡ್ಕ, ಉಫಾದ್ಯಕ್ಷರಾಗಿ ಉಮ್ಮರ್ ಪುತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎ.ಅಶ್ರಫ್ ದೊಡ್ಡಡ್ಡ, ಖಜಾಂಜಿಯಾಗಿ ಕುಂಬಕೋಡ್ ಅಬ್ದುಲ್ ಖಾದರ್ ಗೂನಡ್ಕ, ಕಾರ್ಯದರ್ಶಿಯಾಗಿ ಅಝರುದ್ದೀನ್ ಸಿ.ಎ, ಸಹ ಕಾರ್ಯದರ್ಶಿಯಾಗಿ ಸಿದ್ದೀಕ್ ಬಿ.ಎಂ.ಅವರನ್ನು
ಆಯ್ಕೆ ಮಾಡಲಾಯಿತು.ನಿರ್ದೇಶಕರಾಗಿ ಡಿ.ಆರ್.ಅಬ್ದುಲ್ ಖಾದರ್,
ಎಸ್ ಎಂ ಅಬ್ದುಲ್ಲ, ಪಿ ಕೆ ಅಬೂಶಾಲಿ.ಎಂ ಬಿ ಮುನೀರ್,
ಕೆ ಎಸ್ ಹಾರಿಸ್ ಇವರುಗಳು ಆಯ್ಕೆಯಾದರು.
ಜಮಾಅತಿನ ಖತೀಬರಾದ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿ, ನಿಕಟಪೂರ್ವ ಅಧ್ಯಕ್ಷರುಗಳಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಎಂ.ಬಿ.ಇಬ್ರಾಹಿಂ, ಹಾಜಿ ಅಬ್ದುಲ್ಲ ಕೊಪ್ಪದಕಜೆಯವರು ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಗೊಂಡರು.
ಮಹಮ್ಮದ್ ಕುಂಞಿ ಗೂನಡ್ಕ,ಎಸ್.ಎ.ಅಶ್ರಫ್ ದೊಡ್ಡಡ್ಡ,ಕುಂಬಕೋಡ್ ಅಬ್ದುಲ್ ಖಾದರ್ ಗೂನಡ್ಕ,
ಜಮಾಅತ್ ಸಮಿತಿಯ ವಾರ್ಷಿಕ ಮಹಾಸಭೆಯು ಗೂನಡ್ಕದ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಜರುಗಿತು. ಜಮಾಅತಿನ ಅಧ್ಯಕ್ಷರಾದ ಡಿ.ಆರ್.ಅಬ್ದುಲ್ ಖಾದರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ವಾರ್ಷಿಕ ಮಹಾಸಭೆಯಲ್ಲಿ ಜಮಾಅತ್ ಖತೀಬರಾದ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿಯವರು ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಉಮ್ಮರ್ ಪುತ್ರಿ ಸ್ವಾಗತಿಸಿದರು. ಕಾರ್ಯದರ್ಶಿ ಎಸ್.ಎ.ಅಶ್ರಫ್ ದೊಡ್ಡಡ್ಕ ವರದಿ ವಾಚಿಸಿದರು. ಕೋಶಾಧಿಕಾರಿ ಲತೀಫ್ ಸಖಾಫಿ ಲೆಕ್ಕ ಪತ್ರ ಮಂಡಿಸಿದರು.