ಗೂನಡ್ಕ:ಸುಮಾರು 140 ವರ್ಷಗಳ ಇತಿಹಾಸ ಹೊಂದಿರುವ ಸುಳ್ಯದ ಮುಹಮ್ಮದ್ ಉಗ್ರಾಣಿ ಮನೆತನದ ಕುಟುಂಬ ಸಮ್ಮಿಲನವ ‘ಕುಟುಂಬದೊಂದಿಗೆ ಒಂದುದಿನ“ಎಂಬ ಕಾರ್ಯಕ್ರಮ ಗೂನಡ್ಕದ ಸಜ್ಜನ ಸಭಾ ಭವನದಲ್ಲಿ ನಡೆಯಿತು. ಮುಹಮ್ಮದ್ ಅಷಾದ್ ಅಝೀಜ್ ಕಿರಾ ಅತ್ ಪಟಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಅಗಲಿದ ಕುಟುಂಬ ಸದಸ್ಯರ ಪಾರತ್ರಿಕ ವಿಜಯಕ್ಕಾಗಿ ಯಾಸಿನ್ ಪಠಿಸಿ ದುವಾ ಮಾಡುವುದರ ಮೂಲಕ
ಹಾಜಿ ಅಬ್ದುಲ್ ಖಾದರ್ ಅಜಾದ್ ಅವರು ವಿದ್ಯುಕ್ತ ಚಾಲನೆ ನೀಡಿದರು.
ಹಾಜಿ ಅಬ್ದುಲ್ ಹಮೀದ್ ಜನತಾ ಕುಟುಂಬ ಸದಸ್ಯರನ್ನೆಲ್ಲಾ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಉಮ್ಮರ್ ಬೀಜದಕಟ್ಟೆಯವರು ‘ಕುಟುಂಬ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕುಟುಂಬ ಸಮ್ಮಿಲನವನ್ನು ಆಯೋಜಿಸಲಾಗಿದೆ ಎಂದರು. ಉಗ್ರಾಣಿ ಕುಟುಂಬದ ಎರಡನೇ ಮತ್ತು ಮೂರನೇ ತಲೆ ಮಾರುಗಳ ಸದಸ್ಯರನ್ನು ಪರಿಚಯಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು.
ನೋಂದಣಿ ವಿಭಾಗದ ಮುಖ್ಯಸ್ಥರಾಗಿ ರಿಪಾಯಿ ಜನತಾ ಕಾರ್ಯನಿರ್ವಹಿಸಿದರು.ನಂತರ ಕುಟುಂಬದ ಸದಸ್ಯರಾದ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಮುನಫರ್ ರವರ ನೇತೃತ್ವದಲ್ಲಿ ಆಯೋಜಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಆನ್ಲೈನ್ ಮೂಲಕ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು .
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಸದಸ್ಯರ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು. ಮುಹಮ್ಮದ್ ಉಗ್ರಾಣಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ರಚಿಸುವುದಾಗಿ ಘೋಷಣೆ ಮಾಡಲಾಯಿತು. ಉಗ್ರಾಣಿ ಕುಟುಂಬದ ಸುಮಾರು 750 ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು.ಸ್ವಚ್ಛತಾ ವಿಭಾಗದ ಮುಖ್ಯಸ್ಥರಾಗಿ ಮುಸ್ತಫ ಭದ್ರ ಕಾರ್ಯನಿರ್ವಹಿಸಿದರು, ಪಾರ್ಕಿಂಗ್ ಮತ್ತು ಭದ್ರತಾ ಉಸ್ತುವಾರಿಯನ್ನು ಅಬ್ದುಲ್ ಗಫರ್ ನಿರ್ವಹಿಸಿದರು.
ಸಾಧಕರ ಪಟ್ಟಿಯನ್ನು ಸಫ್ವಾನ್ ಜನತಾ ವಾಚಿಸಿದರು
ವೇದಿಕೆ, ಸಭಾಂಗಣ, ಅಲಂಕಾರ ಮುಂತಾದವುಗಳ ನೇತೃತ್ವವನ್ನು ರಹೀಮ್ ಬೀಜದಕಟ್ಟೆ ಮತ್ತು ಫೈಝಲ್ ಬೀಜದಕಟ್ಟೆ ನಿರ್ವಹಿಸಿದರು
ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆಯನ್ನು ಮಜೀದ್ ಕೆಬಿ ಮತ್ತು ಅಬ್ದುಲ್ ಕಲಾಂ ನಿರ್ವಹಿಸಿದರು. ಊಟೋಪಚಾರದ ವ್ಯವಸ್ಥಾಪಕರಾಗಿ ನಜೀರ್ ಸುಪ್ರೀಂ,ರಫೀಕ್ ಚಾಯ್ಸ್ ಮತ್ತು ಜನತಾ ಆಗ್ರೋ ರಹೀಂ ನಿರ್ವಹಿಸಿದರು, ಬಹುಮಾನ ಸಂಗ್ರಹಕರಾಗಿ ಕಯ್ಯುಮ್
ಕಾರ್ಯನಿರ್ವಹಿಸಿದರು, ಚಯರ್ಮೆನ್ ಹಾಜಿ ಅಬ್ದುಲ್ ಮಜೀದ್ ಹಾಗೂ ಹಾಜಿ ರಿಜ್ವಾನ್ ಜನತಾ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಹಿಳಾ ವಿಭಾಗದ ಮುಖ್ಯ ಸಂಯೋಜಕರಾಗಿ ಝರೀನಾ ಮಜೀದ್, ಅಬ್ಸತ್ ಅಝೀಜ್, ನಝೀರಾ ಹನೀಫ್ ಮತ್ತು ಜಮೀಲ ರಹೀಂ ಬೀಜದಕಟ್ಟೆ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿ ನಿರೂಪಿಸಿದರು.