ಗೂನಡ್ಕ: ಇತ್ತೀಚಿಗೆ ಅಗಲಿದ ಗೂನಡ್ಕ ಸೇರಿದಂತೆ ನೂರಾರು ಜಮಾಅತಿನ ಖಾಝಿಯೂ ಜಮಾಅತಿನ ಗೌರವಾದ್ಯಕ್ಷರೂ ಆದ ಮರ್ಹೂಮ್ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅವರ ಅನುಸ್ಮರಣೆ ಹಾಗೂ ತಹ್ಲೀಲ್ ಮಜ್ಲಿಸ್ ಕಾರ್ಯಕ್ರಮ
ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು. ಖ್ಯಾತ ಪ್ರಭಾಷಣ ಗಾರರಾದ ಅಶ್ರಪ್ ಜೌಹರಿ ಎಮ್ಮಾಮಾಡು ಅನುಸ್ಮರಣಾ ಭಾಷಣ ಮಾಡಿದರು.ಗೂನಡ್ಕ ಖತೀಬರಾದ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿ ತಹ್ಲೀಲ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜಮಾಅತರು ಸೇರಿದಂತೆ ನೂರಾರು ಜನರು ಭಾಗವಹಿಸಿದರು.ಮಹಝ್ಝಿನ್ ರಾದ ಅಬ್ದುಲ್ ಲತೀಪ್ ಸಖಾಫಿ ಸುಳ್ಯ.
ಲತೀಪ್ ಜೌಹರಿ ಮೇನಾಲ ಮುಂತಾದ ವರು ಉಪಸ್ಥಿತರಿದ್ದರು.
ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಸ್ವಾಗತಿಸಿ ವಂದಿಸಿದರು