ತಿರುವನಂತಪುರ: ತಿರುವೋಣಂ ಬಂಪರ್ ಲಾಟರಿಯ ಮೊದಲ ಬಹುಮಾನದ ಮೊತ್ತವನ್ನು 25 ಕೋಟಿಯಿಂದ 30 ಕೋಟಿಗೆ ಏರಿಕೆ ಮಾಡಲಾಗಿದೆ ಎಂದು ಕೇರಳಂ ರಾಜ್ಯ ಲಾಟರಿ ನಿರ್ದೇಶನಾಲಯ ತಿಳಿಸಿದೆ.ಜುಲೈ 17ರಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಪರಿಪ್ಕೃತ ಬಹುಮಾನವನ್ನು ಒಳಗೊಂಡಿರುವ ‘ಓಣಂ ಬಂಪರ್ ಲಾಟರಿ’ಯನ್ನು ಬಿಡುಗಡೆ ಮಾಡಲಿದ್ದಾರೆ.ಲಾಟರಿಯ ಬಹುಮಾನ
ಮೊತ್ತವನ್ನು ಪರಿಷ್ಕರಣೆ ಮಾಡಲಾಗಿದ್ದು, ಎರಡನೇ ಬಹುಮಾನ 1 ಕೋಟಿ ಇದ್ದರೆ, ಮೂರನೇ ಬಹುಮಾನದ ಮೊತ್ತವನ್ನು 50 ಲಕ್ಷದಿಂದ 25 ಲಕ್ಷಕ್ಕೆ ಇಳಿಸಲಾಗಿದೆ. ಕೇರಳಂ ಸರ್ಕಾರವು ಲಾಟರಿಯ ಬಹುಮಾನದ ಮೊತ್ತವನ್ನು ಹೆಚ್ಚಿಸಿದ್ದರೂ, ಟಿಕೆಟ್ ದರವು ಪ್ರತಿ ಟಿಕೆಟ್ಗೆ 500 ರಷ್ಟೇ ಮುಂದುವರಿಯಲಿದೆ. ಏಜೆಂಟರಿಗೆ 90 ಲಕ್ಷ ಟಿಕೆಟ್ಗಳನ್ನು ನೀಡಲು
ನಿರ್ಧರಿಸಲಾಗಿದ್ದರೂ, ಬೇಡಿಕೆಗೆ ಅನುಗುಣವಾಗಿ ಅವುಗಳನ್ನು ಮುದ್ರಿಸಲಾಗುವುದು ಎಂದು ತಿಳಿಸಿದೆ.ಈ ಬಾರಿ ಲಾಟರಿಯ ಒಟ್ಟು ಬಹುಮಾನದ ಮೊತ್ತ 125.54 ಕೋಟಿಗಳಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ.2022ರ ಜುಲೈನಲ್ಲಿ ತಿರುವೋಣಂ ಬಂಪರ್ ಲಾಟರಿಯ ಬಹುಮಾನ ಮೊತ್ತವನ್ನು ಕೇರಳಂ ಸರ್ಕಾರವು 25 ಕೋಟಿಗೆ ಏರಿಕೆ ಮಾಡಿತ್ತು.





