ಸುಳ್ಯ:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ನಗರದ ಸಮೀಪ ಪರಿವಾರಕಾನದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಮಂಗಳವಾರ ರಾತ್ರಿ ಪರಿವಾರಕಾನ ಸಮೀಪ ಮೂರು ಆನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡ ದಾಟುವ ದೃಶ್ಯವನ್ನು ಪ್ರಯಾಣಿಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕಾಡಾನೆಗಳು
ರಸ್ತೆ ದಾಟುವ ಸಂದರ್ಭದಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ.
ಕಾಡಾನೆಗಳು ನಿಧಾನವಾಗಿ ರಸ್ತೆ ದಾಟಿ ರಸ್ತೆ ಬದಿಗೆ ಸರಿದವು ಎಂದು ಹೇಳಲಾಗಿದೆ. ಕಾಡಾನೆಗಳ ಹಿಂಡು ಮತ್ತೆ ನಗರ ಸಮೀಪ ಕಾಣಿಸಿಕೊಂಡಿರುವುದರಿಂದ ಸಮೀಪ ಪ್ರದೇಶಗಳಲ್ಲಿ ಮತ್ತು

ವಾಹನ ಸವಾರರಲ್ಲಿ ಆತಂಕ ಉಂಟಾಗಿದ್ದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ. ಅರಂಬೂರು ಭಾದಲ್ಲಿ ಕೆಲ ದಿನಗಳಿಂದ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ.








