ಬಾಸ್ಟನ್: 2026 ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-0 ಗೋಲುಗಳ ಅಂತರದ ಜಯ ಸಾಧಿಸಿರುವ ಫ್ರಾನ್ಸ್, ಸೆಮಿಫೈನಲ್ಗೆ ಪ್ರವೇಶಿಸಿದೆ.ಫ್ರಾನ್ಸ್ ಸತತ ಮೂರನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿತು.ನಾಯಕ ಕೈಲಿಯನ್ ಎಂಬಾಪೆ ಮತ್ತು
ಒಸ್ಮಾನ್ ಡೆಂಬೆಲೆ ತಲಾ ಒಂದು ಗೋಲು ಗಳಿಸಿ ಫ್ರಾನ್ಸ್ ಗೆಲುವಿನ ರೂವಾರಿಯೆನಿಸಿದರು.ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಫ್ರಾನ್ಸ್ ನಿರಂತರ ಆಕ್ರಮಣ ನಡೆಸಿದರೂ ಮೊರಾಕ್ಕೊ ರಕ್ಷಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ. 60ನೇ ನಿಮಿಷದಲ್ಲಿ ಎಂಬಾಪೆ, 66ನೇ ನಿಮಿಷದಲ್ಲಿ ಒಸ್ಮಾನ್ ಡೆಂಬೆಲೆ ಗೋಲು ಬಾರಿಸಿದರು.ಪಂದ್ಯದ ಕೊನೆಯ ನಿಮಿಷದವರೆಗೂ ಮೊರಾಕ್ಕೊ ಆಟಗಾರರು ಹೋರಾಟ ನಡೆಸಿದರೂ, ಫ್ರಾನ್ಸ್ನ ಅನುಭವಿ ಆಟಗಾರರ ಮುಂದೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
2022ರ ವಿಶ್ವಕಪ್ ಸೆಮಿಫೈನಲ್ನಲ್ಲೂ ಉಭಯ ತಂಡಗಳು ಮುಖಾಮುಖಿಯಾಗಿದ್ದಲೂ ಗೆಲುವು ಫ್ರಾನ್ಸ್ ಪಾಲಾಗಿತ್ತು.
ಸೆಮಿಫೈನಲ್ನಲ್ಲಿ ಫ್ರಾನ್ಸ್ ತಂಡವು ಸ್ಪೇನ್ ಹಾಗೂ ಬೆಲ್ಜಿಯಂ ನಡುವಣ ವಿಜೇತ ತಂಡವನ್ನು ಎದುರಿಸಲಿದೆ.





