ಮಂಗಳೂರು:ಧಾರಾಕಾರ ಮಳೆಗೆ ಮಂಗಳೂರು ನಗರದ ನಾಗೊರಿ ಬಳಿಯ ಗರೋಡಿ ಎಂಬಲ್ಲಿ ಮನೆಯ ಮೇಲೆ ತಡೆಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ ಇಬ್ಬರು ಮಕ್ಕಳು ಹಾಗು ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ.ಅವಶೇಷಗಳ ಅಡಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ.ಬಾಡಿಗೆ ಕಟ್ಟಡದಲ್ಲಿ
ನಾಲ್ಕು ಕುಟುಂಬಗಳು ವಾಸವಾಗಿದ್ದವು.ನಸುಕಿನಲ್ಲಿ ತಡೆಗೋಡೆ ಕುಸಿದ ಪರಿಣಾಮ ಮನೆಯ ಹಿಂಬದಿಯ ಗೋಡೆಯೂ ಕುಸಿದಿತ್ತು.ಏಕಾಏಕಿ ಕುಸಿತ ಸಂಭವಿಸಿದ್ದು, ಆರು ಮಂದಿ ಮಣ್ಣಿನಡಿ ಸಿಲುಕಿದ್ದರು. ಈ ವೇಳೆ ಒಬ್ಬರು ಪುರುಷ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿ ಸಿಲುಕಿದ್ದ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತಿದೆ. ಘಟನೆಯಲ್ಲಿ ಶಾಂತ (35),ಅನಾಮಿಕ (7) ತನು(3) ಮೃತಪಟ್ಟಿದ್ದಾರೆ. ಮತ್ತು ಅಲ್ಕಾ(14 ),ಅನುಷ್ಕಾ( 11)
ಬಾಲಕೃಷ್ಣ(40) ಅವರನ್ನು ರಕ್ಷಣೆ ಮಾಡಲಾಗಿದೆ.






