ಸುಳ್ಯ:ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ವಾಯುಜಿತ್ ರೇಸಿಂಗ್ ಗೋ-ಕಾರ್ಟ್ 7.0 ಡಿಸೈನ್ ಚಾಲೆಂಜ್ ತಂಡವು ಕೊಯಂಬತೂರ್ನಲ್ಲಿ ನಡೆದ ಕರಿ ಮೋಟಾರ್ ಸ್ಪೀಡ್ ವೇ ರೇಸ್ ಟ್ರಾಕ್, ರಾಷ್ಟ್ರಮಟ್ಟದ ಚಾಂಪ್ಯನ್ಶಿಪ್ ಪಡೆದುಕೊಂಡಿದೆ. 60 ಕ್ಕಿಂತಲೂ ಅಧಿಕ ತಂಡವು ಭಾಗವಹಿಸಿತ್ತು. ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು
ಸತತ 7 ವರ್ಷದಿಂದ ಭಾಗವಹಿಸಿದೆ. 3 ಬಾರಿ ಚಾಂಪ್ಯನ್, ಒಂದು ಭಾರಿ ರನ್ನರ್ ಅಪ್ ಮತ್ತು ಆಗಿದೆ.
ಪ್ರೊ. ಭರತ್ ಪಿ.ಯು, ಪ್ರೊ. ರಾಘವೇಂದ್ರ ಬಿ. ಕಾಮತ್ ವಿಭಾಗ ಮುಖ್ಯಸ್ಥರು ಹಾಗೂ ಡಾ. ಉಜ್ವಲ್ ಯು.ಜೆ. ಸಿ.ಇ.ಒ., ಕೆವಿಜಿಸಿಇ ಇವರ ಮಾರ್ಗದರ್ಶನದಲ್ಲಿ ಈ ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿಕೊಂಡು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಾಂಪ್ಯನ್ ಶಿಪ್ ಪಡೆದುಕೊಂಡಿರುತ್ತಾರೆ. ಈ ತಂಡದ ನಾಯಕನಾಗಿ ಜಯರಾಜ್ ಹಾಗೂ 26 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸಾಧನೆಗಾಗಿ ಕಾಲೇಜಿನ ಆಡಳಿತ ಮಂಡಳಿ ಕಮಿಟಿ ‘ಬಿ’ ಎಒಎಲ್ಇ(ರಿ) ರೂ50,000 ಪ್ರಾಯೋಜಕತ್ವ ನೀಡಿದೆ ಮತ್ತು ವಿಜೇತ ತಂಡಕ್ಕೆ ರೂ.30,000/ ನಗದು ಬಹುಮಾನವನ್ನು ನೀಡಿ ಗೌರವಿಸಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಎ.ಒ.ಎಲ್.ಇ. ಕಮಿಟಿ ‘ಬಿ’ ಚೇರ್ಮೆನ್ ಡಾ.ರೇಣುಕಾಪ್ರಸಾದ್ ಕೆ.ವಿ., ಸೆಕ್ರೆಟರಿ ಡಾ. ಜ್ಯೋತಿ ಆರ್. ಪ್ರಸಾದ್, ಎಕ್ಸೆಕ್ಯುಟಿವ್ ಡೈರೆಕ್ಟರ್, ಕೆ.ವಿ.ಜಿ.ಡಿ.ಸಿ.&ಹೆಚ್. ಮೌರ್ಯ ಆರ್. ಕುರುಂಜಿ, ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಪ್ರೊ. ರಾಘವೇಂದ್ರ ಆರ್. ಕಾಮತ್, ನಾಗೇಶ್ ಕೆ., ಕಾಲೇಜಿನ ಆಡಳಿತಾಧಿಕಾರಿ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂಧಿ ವರ್ಗದವರು ಅಭಿನಂದಿಸಿರುತ್ತಾರೆ.