ಸುಳ್ಯ: ದಿನಪೂರ್ತಿ ವಿದ್ಯುತ್ ಕಡಿತದ ಬರೆ, ಬೆಳಿಗ್ಗೆ 9.30ಕ್ಕೆ ಕಡಿತವಾದ ವಿದ್ಯುತ್ 5 ಗಂಟೆಗೆ ಬರುವುದಾಗಿ ಮೆಸ್ಕಾಂ ಪ್ರಕಟಣೆ ನೀಡಲಾಗಿತ್ತು. ಆದರೆ ರಾತ್ರಿ 7.30 ಆದರೂ ವಿದ್ಯುತ್ ನಾಪತ್ತೆ. ಕಾವು- ಸುಳ್ಯ ಏಕಪಥ ಮಾರ್ಗವನ್ನು ದ್ವಿಪಥ ಕಾಮಗಾರಿಗೆಂದು ಕಳೆದ ಹಲವಾರು ತಿಂಗಳಿನಿಂದ ವಾರದಲ್ಲಿ ಒಂದು ದಿನ, ಕೆಲವೊಮ್ಮೆ ವಾರದಲ್ಲಿ ಎರಡು ದಿನ ಎಂಬಂತೆ
ದಿನಪೂರ್ತಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ಮಂಗಳವಾರವೂ ವಿದ್ಯುತ್ ಕಡಿತ ಮಾಡಲಾಗಿತ್ತು. 5ಗಂಟೆಗೆ ವಿದ್ಯುತ್ ನೀಡುವುದಾಗಿ ಹೇಳಿ, ರಾತ್ರಿ 7.30 ಆದರೂ ಇನ್ನೂ ಕರೆಂಟ್ ಬಂದಿಲ್ಲ. ದಿನಪೂರ್ತಿ ಕರೆಂಟ್ ಕಡಿತಗೊಂಡಿದ್ದು ರಾತ್ರಿ 7.30 ಆದರೂ ಕರೆಂಟ್ ಬಾರದ ಕಾರಣ ಬೆಳಕು, ನೀರಿಲ್ಲದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಂಪ್ ಚಾಲೂ ಆಗದ ಕಾರಣ ಹಲವರಿಗೆ ನೀರಿನ ಸಮಸ್ಯೆ ಉಂಟಾಗಿದೆ.ಸುಳ್ಯ ನಗರ ಪೂರ್ತಿ ಕತ್ತಲಲ್ಲಿ ಮುಳುಗಿದೆ. ಬೇಸಿಗೆ ಆರಂಭಗೊಂಡ ಬಳಿಕ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತಲೆದೋರಿದೆ, ಇದೀಗ ಹಗಲು ರಾತ್ರಿ ಎನ್ನದೆ ನಿರಂತರ ಕಡಿತದ ಬರೆ..