ಎಲಿಮಲೆ:ಬದ್ರಿಯಾ ಜಮಾತ್ ಕಮಿಟಿ ಎಲಿಮಲೆ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಎಲಿಮಲೆ ಇದರ ಆಶ್ರಯದಲ್ಲಿ
ಮಾಸಿಕ ಸ್ವಲಾತ್ ಮಜ್ಲಿಸ್,ಪ್ರಾರ್ಥನಾ ಕೂಟ , ಅಗಲಿದ ಉಲಮಾ ಉಮರಾ ಅನುಸ್ಮರಣೆ ಕಾರ್ಯಕ್ರಮ ಹಾಗೂ ಗ್ರಾಂಡ್ ಇಫ್ತಾರ್ ಮೀಟ್ ಎಲಿಮಲೆ ಮಸೀದಿ ಪಠಾರದ ಮರ್ಹೂಂ ಎಲಿಮಲೆ ಸಾಹುಕಾರ್ ವೇದಿಕೆಯಲ್ಲಿ ಜರುಗಿತು.ಪ್ರಾರ್ಥನಾ ಕೂಟದ ನೇತೃತ್ವವನ್ನು
ಎಲಿಮಲೆ ಮುದರ್ರಿಸರಾದ ಮುಹ್ಸಿನ್ ಅಲವಿಕೋಯ ತಂಙಳ್ ಕುಂಜಿಲಂ ಅವರು ವಹಿಸಿದ್ದರು. ಕಳೆದ 40 ವರ್ಷಗಳಿಂದ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ ಕಾರುಣ್ಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣಕ್ಕಾಗಿ ತೆರಳುತ್ತಿರುವ ಮುತಅಲ್ಲಿಮರಿಗೆ ಹಾಗೂ ಎಲಿಮಲೆ, ಮೆತ್ತಡ್ಕ, ಜೀರುಮುಕಿ ಮದರಸಗಳಲ್ಲಿ ಸೇವೆಗೈದ ಸದರ್ ಉಸ್ತಾದ ರುಗಳನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಇಕ್ರಾಮುಸ್ಸುನ್ನ ಹಯಾತುಲ್ ಇಸ್ಲಾಂ ದರ್ಸ್ ವಿಧ್ಯಾರ್ಥಿಗಳು ತಂಙಳ್ ರವರಿಗೆ ಗುರುಗಳ ಗೌರವಾರ್ಪಣೆಯನ್ನು ನೆರವೇರಿಸಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕರವರು ಸನ್ಮಾನ ನೆರವೇರಿಸಿದರು.
ಮಹಮೂದ್ ಸಖಾಫಿ ಅಗಲಿದ ಉಲಮಾ ಉಮರಾ ನಾಯಕರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಖಾದರ್ ಪಾಣಾಜೆ, ಸಹಾಯಕ ಮುದರ್ರಿಸ್ ಹಾರಿಸ್ ಜುರೈಸ್ ಸಖಾಫಿ, ಬಿ ಎಂ ಎ ಫ್ರೂಟ್ಸ್ ಅಂಡ್ ವೆಜಿಟೇಬಲ್ ಮಾಲಕರಾದ ಅಬೂಬಕರ್ ಹಾಜಿ, ಮಸೀದಿ ಮಾಜಿ ಅಧ್ಯಕ್ಷರಾದ ಮೂಸ ಹಾಜಿ ಜೀರ್ಮುಕಿ,ಜೀರ್ಮುಖಿ ಮುಹಿಯದ್ದೀನ್ ಮಸೀದಿ ಅಧ್ಯಕ್ಷರಾದ ಹಸನ್ ಹರ್ಲಡ್ಕ,
ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಎಸೋಸಿಯೇಷನ್ ಗುತ್ತಿಗಾರು ಅಧ್ಯಕ್ಷ ಶಾಹುಲ್ ಹಮೀದ್ ಬಾಕಿಲ,ಖಿದ್ಮತುಲ್ ಇಸ್ಲಾಂ ಎಸೋಸಿಯೇಶನ್ ದುಗಲಡ್ಕ ಅಧ್ಯಕ್ಷರಾದ ಹುಸೇನ್ ಕೊಳಂಜಿಕೋಡಿ,ಜೀರ್ಮುಖಿ ಮಸೀದಿ ಇಮಾಮ್ ಅಶ್ರಫ್ ಜೌಹರಿ ಕುಂಭಕೋಡು. ಎಲಿಮಲೆ ಮದ್ರಸ ಮುಖ್ಯೋಪಾಧ್ಯಾಯರಾದ ಫೈಸಲ್ ಸಕಾಫಿ.ಜಮಾತ್ ಕಮಿಟಿ ಕಾರ್ಯದರ್ಶಿ ಇಬ್ರಾಹಿಂ ಜಿರ್ಮುಕ್ಕಿ, ಮೆತ್ತಡ್ಕ ಸದರ್ ಫವಾಜ್ ಹಿಮಾಮಿ, ಖಾದಿಂ ಮುಸ್ತಫ ಮುಸ್ಲಿಯಾರ್,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು .
ನುಸ್ರತ್ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು.ವಿಧ್ಯಾರ್ಥಿಗಳಿಗೆ ವಸ್ತ್ರ ಹಾಗೂ ಬಡ ಕುಟುಂಬಗಳಿಗೆ ನುಸ್ರತ್ ವತಿಯಿಂದ ರಂಝಾನ್ ಕಿಟ್ ವಿತರಿಸಲಾಯಿತು.