ಚೆಂಬು:ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಕಳೆದ ತಡ ರಾತ್ರಿ ನಡೆದಿದೆ.ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆ ತುಳಿತಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿ ಎಂದು ತಿಳಿದು ಬಂದಿದೆ.ಅವರು ಅ.6ರ ರಾತ್ರಿ ಸುಮಾರು 10.30 ರ ಸಮಯಕ್ಕೆ ಮನೆಯ ಸಮೀಪದ
ತೋಟದಲ್ಲಿ ನಾಯಿ ಬೋಗಳುತ್ತಿರುವುದು ಕೇಳಿ ನೋಡಲು ತೋಟದ ಕಡೆಗೆ ತೆರಳಿದ ಸಂದರ್ಭದಲ್ಲಿ ಆನೆ ದಾಳಿ ಮಾಡಿದೆ. ಗಾಯಗೊಂಡ ಅವರನ್ನು ಮನೆಯವರು ತಕ್ಷಣವೇ ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮದ್ಯೆ ಮೃತ ಪಟ್ಟಿದ್ದಾರೆ. ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.




