ಧರ್ಮಸ್ಥಳ:ರಾಮೇಶ್ವರಂ ನಲ್ಲಿರುವ ಡಾ.ಎ.ಪಿ.ಜೆ., ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಧರ್ಮಸ್ಥಳ ಮಂಜೂಷಾ ವಾಹನಗಳ ಮ್ಯೂಸಿಯಂನಲ್ಲಿ ಪ್ರದಶ೯ನಕ್ಕೆ ಇಡಲು ಅಬ್ದುಲ್ಕಲಾಂ ಬಳಸಿದ ಟಾಟಾನಾನೋ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ಹೆಗ್ಗಡೆಯವರಿಗೆ ಅಪಿ೯ಸಲಾಯಿತು.ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಧಮ೯ಸ್ಥಳಕ್ಕೆ ಭೇಟಿ ನೀಡಿದ
ಸಂದಭ೯ವನ್ನು ಸ್ಮರಿಸಿದ ಹೆಗ್ಗಡೆಯವರು, ಅವರ ಸರಳ ವ್ಯಕ್ತಿತ್ವ, ಸವಧಮ೯ಸಮನ್ವಯ ನೀತಿ, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ನೆನೆಪಿಸಿಕೊಂಡರು.ಡಾ. ಎ.ಪಿ.ಜೆ., ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎ.ಪಿ.ಜೆ.ಎಂ.. ನಝೀಮಾ ಮರೈಕಾಯಲ್, ಕಾಯ೯ದಶಿ೯ ಎ.ಪಿ.ಜೆ.ಎಂ.. ಜೈನೀಲಾಭಿ ಡೀಮ್ ಮತ್ತು ಸಹಸಂಸ್ಥಾಪಕ ಎ.ಪಿ.ಜೆ.ಎಂ.. ಶೇಖ್ಸಲೀಂ ಉಪಸ್ಥಿತರಿದ್ದು ಪ್ರತಿಷ್ಠಾನದ ಪರವಾಗಿ ಟಾಟಾನಾನೋ ಕಾರು ಮತ್ತು ಪೆನ್ನು ಪೂಜ್ಯ ಹೆಗ್ಗಡೆಯವರಿಗೆ ದಾಖಲೆ ಸಹಿತ ಅಪಿ೯ಸಿದರು.ಹೆಗ್ಗಡೆಯವರು ಪ್ರತಿಷ್ಠಾನಕ್ಕೆ ಕೃತಜ್ಞತೆ ವ್ಯಕ್ತಪಪಡಿಸಿ ದಾನಿಗಳನ್ನು ಗೌರವಿಸಿದರು.ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿ.ಇ.ಒ. ಅನಿಲ್ ಕುಮಾರ್ ಸ್ವಾಗತಿಸಿ ಕಾಯ೯ಕ್ರಮ ನಿವ೯ಹಿಸಿದರು.
















