ಕಾಞಂಗಾಡ್: ಸಿಪಿಐಎಂ ನೂತನ ಜಿಲ್ಲಾ ಕಾರ್ಯದರ್ಶಿಯಾಗಿ ಪಕ್ಷದ ಹಿರಿಯ ಮುಖಂಡ, ತ್ರಿಕ್ಕರಿಪುರ ಶಾಸಕ ಎಂ.ರಾಜಗೋಪಾಲನ್ ಆಯ್ಕೊಗೊಂಡಿದ್ದಾರೆ. ಕಾಞಂಗಾಡಿನಲ್ಲಿ ನಡೆದ ಪಕ್ಷದ ಜಿಲ್ಲಾ ಸಮ್ಮೇಳನದಲ್ಲಿ ನೂತನ ಸಾರಥಿಯ ಆಯ್ಕೆ ನಡೆಯಿತು.ಕಮ್ಯೂನಿಸ್ಟ್ ಆಂದೋಲನಗಳ
ಚರಿತ್ರೆ ಸಾರುವ ಕಯ್ಯೂರು ನಿವಾಸಿಯಾದ ಎಂ.ರಾಜಗೋಪಾಲನ್ ಈ ಹಿಂದೆ ಸಿಐಟಿಯು ಜಿಲ್ಲಾ ಕಾರ್ಯದರ್ಶಿಯಾಗಿದ್ದರು.
ಅಲ್ಲದೇ ಕಯ್ಯೂರ್ -ಚಿಮೇನಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದರು.
2016ರಲ್ಲಿ ಮೊದಲ ಬಾರಿಗೆ ತ್ರಿಕರಿಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿಸಲ್ಪಟ್ಟ ಅವರು ಸಿಪಿಐಎಂ ಪಕ್ಷದ ತಳಮಟ್ಟದಿಂದ ಬೆಳೆದು ಬಂದವರು. ನೂತನ ಜಿಲ್ಲಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.