ಸುಳ್ಯ:ಸುಳ್ಯ ತಾಲೂಕಿನಾಧ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಅಲ್ಲಲ್ಲಿ ಬರೆ ಜರಿತ ಮತ್ತು ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಚರಂಡಿಯಿಲ್ಲದೇ ಸಂಪೂರ್ಣ ಹದೆಗೆಟ್ಟಿದ್ದು ಶೀಘ್ರ ದುರಸ್ತಿಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ನಿಯೋಗ
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರವರನ್ನು ಭೇಟಿಯಾಗಿ ಚರ್ಚೆ ಆಗ್ರಹಿಸಿದ್ದಾರೆ.
ಬೆಳ್ಳಾರೆ, ಕಳಂಜ, ಪೆರುವಾಜೆ ಪ್ರದೇಶಗಳಲ್ಲಿ ರಸ್ತೆಗೆ ಬರೆ ಜರಿದುಬಿದ್ದು ಹಾನಿಯಾಗಿದೆ.ಲೋಕೋಪಯೋಗಿ ಇಲಾಖೆ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆಯ ಕಾಮಗಾರಿಯಿಂದಾಗಿ ಚರಂಡಿಗಳು ಮುಚ್ಚಿ ಮಳೆ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗಿದೆ. ಇಲಾಖೆ ಈ ಬಗ್ಗೆ ತುರ್ತು ಸ್ಪಂದಿಸಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಆಗ್ರಹಿಸಿದರು.ಸತ್ಯಕುಮಾರ್ ಆಡಿಂಜ, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ, ಬಾಲಸುಬ್ರಹ್ಮಣ್ಯ ಮೊಂಟಡ್ಕ, ವಿಜಯಕುಮಾರ್ ಆಲೆಟ್ಟಿ ಇದ್ದರು.